ಕರ್ನಾಟಕ

karnataka

ETV Bharat / city

ವಿಧಾನಸೌಧ ಸಮೀಪ ಭೂಕುಸಿತ: ಸಾರ್ವಜನಿಕರಲ್ಲಿ ಕೆಲಕಾಲ ಆತಂಕ - ಬೆಂಗಳೂರು

ವಿಧಾನಸೌಧದ ಗೇಟ್ ನಂಬರ್ 2ರ ಬಳಿ ಇಂದು ಸಂಜೆ ಭೂ ಕುಸಿತ ಉಂಟಾಗಿದೆ.

Landslide near Vidhana Soudha
ವಿಧಾನಸೌಧದ ಸಮೀಪ ಭೂ ಕುಸಿತ

By

Published : Sep 16, 2021, 6:59 PM IST

Updated : Sep 16, 2021, 7:07 PM IST

ಬೆಂಗಳೂರು:ವಿಧಾನಸೌಧದ ಸಮೀಪ ಭೂಕುಸಿತ ಉಂಟಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಗೇಟ್ ನಂಬರ್ 2ರ ಬಳಿ ಡಾಂಬರು ಹಾಕಿದ ರಸ್ತೆಯಲ್ಲಿ ಸಂಜೆ ದಿಢೀರನೆ ಘಟನೆ ನಡೆಯಿತು. ಸುಮಾರು 10 ಅಡಿಯಷ್ಟು ಕುಸಿತ ಉಂಟಾಗಿದ್ದು, ಯಾವುದೇ ಹಾನಿಯಾಗಿಲ್ಲ.

ವಿಧಾನಸೌಧ ಸಮೀಪ ಭೂಕುಸಿತ..

ಈ ರಸ್ತೆಯಲ್ಲಿ ಸಾಕಷ್ಟು ವಾಹನಗಳು ಓಡಾಡುತ್ತಿದ್ದು, ಭೂಕುಸಿತದಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿತ್ತು. ಕಾರೊಂದು ಸ್ವಲ್ಪ ಅಂತರದಲ್ಲೇ ಪಾರಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಕುಸಿತವಾಗಿರುವ ಸ್ಥಳದಲ್ಲಿ ಬ್ಯಾರಿಕೇಡ್​ ನಿರ್ಮಿಸಿ ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಸಚಿವರು ನಮ್ಮ ಕೈಗೆ ಸಿಗುವುದೇ ಇಲ್ಲ: ಶಾಸಕ ಬಸವನಗೌಡ ಯತ್ನಾಳ್‌

Last Updated : Sep 16, 2021, 7:07 PM IST

ABOUT THE AUTHOR

...view details