ಕರ್ನಾಟಕ

karnataka

ETV Bharat / city

ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಇಂದಿನಿಂದ ಜಾರಿ... ಹೊಸ ಕಾಯ್ದೆಯಂತೆ ನೋಂದಣಿ ಮಾಡಲು ಆದೇಶ

ಕೃಷಿ ಭೂಮಿ ಖರೀದಿಗಿದ್ದ ನಿರ್ಬಂಧ ಇರುವುದಿಲ್ಲ. ಕೃಷಿ ಭೂಮಿಯನ್ನು ನೋಂದಣಿ ಮಾಡುವಾಗ ಹೊಸ ತಿದ್ದುಪಡಿ ಅನುಸಾರ ನೋಂದಣಿ ಮಾಡುವಂತೆ ಉಪ‌ ನೋಂದಣಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಇಂದಿನಿಂದ ಜಾರಿ
ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಇಂದಿನಿಂದ ಜಾರಿ

By

Published : Aug 19, 2020, 2:22 AM IST

ಬೆಂಗಳೂರು: ಕೃಷಿ ಭೂಮಿ ಖರೀದಿ ಸಂಬಂಧ ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯು ಇಂದಿನಿಂದ (ಬುಧವಾರ) ಜಾರಿಗೆ ಬರಲಿದೆ.

ಈ ನಿಟ್ಟಿನಲ್ಲಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಕೃಷಿ ಭೂಮಿ ಖರೀದಿಗಿದ್ದ ನಿರ್ಬಂಧ ಇರುವುದಿಲ್ಲ. ಕೃಷಿ ಭೂಮಿಯನ್ನು ನೋಂದಣಿ ಮಾಡುವಾಗ ಹೊಸ ತಿದ್ದುಪಡಿ ಅನುಸಾರ ನೋಂದಣಿ ಮಾಡುವಂತೆ ಉಪ‌ ನೋಂದಣಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಕೃಷಿಕರಲ್ಲದವರೂ ಕೃಷಿ ಭೂಮಿ ಖರೀದಿಗೆ ಅನುಕೂಲವಾಗುವ ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ ಸುಗ್ರೀವಾಜ್ಞೆಗೆ ರಾಜ್ಯಪಾಲರು ಜುಲೈನಲ್ಲಿ ಅಂಕಿತ ಹಾಕಿದ್ದರು. ಅದರಂತೆ ಕೃಷಿ ಜಮೀನು ಖರೀದಿಗೆ ಇದ್ದ ಎಲ್ಲ ನಿರ್ಬಂಧಗಳನ್ನು ತೆಗೆದು ಹಾಕಲಾಗಿದೆ. ಕೃಷಿಕರಲ್ಲದವರೂ ಕೃಷಿ ಭೂಮಿ ಖರೀದಿಸಬಹುದಾಗಿದೆ. ಹಾಗೆಯೇ ಐವರು ಸದಸ್ಯರ ಕುಟುಂಬ 108 ಎಕರೆಯ ವರೆಗಿನ ಮಿತಿಯಲ್ಲಿ ಜಮೀನು ಹೊಂದಬಹುದಾಗಿದೆ. ಜತೆಗೆ ಕೃಷಿ ಭೂಮಿ ಖರೀದಿಗೆ ಕೃಷಿಯೇತರ ಆದಾಯದ ಮಿತಿಯನ್ನೂ ರದ್ದುಗೊಳಿಸಲಾಗಿದೆ.

ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಇಂದಿನಿಂದ ಜಾರಿ
ಇದೀಗ ಕಂದಾಯ ಇಲಾಖೆ ಈ ಸಂಬಂಧ ಆದೇಶ ಹೊರಡಿಸಿ, ತಿದ್ದುಪಡಿ ಅನುಸಾರ ಕೃಷಿ ಭೂಮಿಯನ್ನು ನೋಂದಣಿ ಮಾಡುವಂತೆ ಸೂಚನೆ ನೀಡಿದೆ.ಈ ಹಿಂದೆ ಕಾಯ್ದೆಯ ಪ್ರಕಾರ, ಕೃಷಿ ಮೂಲದ ಕುಟುಂಬದವರು ಮಾತ್ರ ರಾಜ್ಯದಲ್ಲಿ ಕೃಷಿ ಭೂಮಿ ಖರೀದಿಸಲು ಸಾಧ್ಯವಿತ್ತು. ಕೃಷಿಕರಲ್ಲದವರು ಕೃಷಿ ಮಾಡಲು ಆಸಕ್ತಿ ಹೊಂದಿದ್ದರೂ ಕೃಷಿ ಭೂಮಿ ಖರೀದಿಸಲು ಕಾಯ್ದೆಯಲ್ಲಿ ಅವಕಾಶವಿರಲಿಲ್ಲ. ಇದೀಗ ಕೃಷಿ ಸಂಬಂಧಿತ ಚಟುವಟಿಕೆಗೆ ಮಾತ್ರ ಬಳಸುವ ಷರತ್ತು ವಿಧಿಸಿ ಯಾರು ಬೇಕಾದರೂ ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ.ಭೂ ಸುಧಾರಣೆ ಕಾಯ್ದೆಯಡಿ ಜಾರಿಯಲ್ಲಿರುವ 63ಎ, 79ಎ ಹಾಗೂ ಬಿ ಸೆಕ್ಷನ್‌ ಪ್ರಕಾರ ರೈತ ಹಿನ್ನೆಲೆ ಹೊಂದಿಲ್ಲದವರು ಹಾಗೂ ನಿರ್ದಿಷ್ಟ ಆದಾಯಕ್ಕಿಂತ ಹೆಚ್ಚು ಆದಾಯ ಹೊಂದಿರುವವರು ಕೃಷಿ ಜಮೀನು ಖರೀದಿಸಲು ಅವಕಾಶ ಇರಲಿಲ್ಲ. ಈ ತಿದ್ದುಪಡಿ ಕಾಯ್ದೆ ಪ್ರಕಾರ ಇನ್ನು ಮುಂದೆ ಕೃಷಿ ಜಮೀನು ಖರೀದಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಯಾರು, ಎಲ್ಲಿ ಬೇಕಾದರೂ ಕೃಷಿ ಜಮೀನು ಖರೀದಿಸಬಹುದಾಗಿದೆ.ಈ ಕಾಯ್ದೆ ವಿರೋಧಿಸಿ ಈಗಾಗಲೇ ಹಲವು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.

ABOUT THE AUTHOR

...view details