ಕರ್ನಾಟಕ

karnataka

ETV Bharat / city

ಅಪ್ಪು​ ಸಮಾಧಿ ಬಳಿ ಕೆಎಸ್​​ಆರ್​​ಎಲ್​ಪಿಎಸ್ 'ದೀಪ ನಮನ' - ಅಪ್ಪು​ ಸಮಾಧಿ ಎದುರು ದೀಪ ನಮನ

ಸಂಜೀವಿನಿ ಕೆಎಸ್​​ಆರ್​​ಎಲ್​ಪಿಎಸ್ ಸಂಸ್ಥೆ ದಿ.ನಟ ಪುನೀತ್ ರಾಜ್​​ಕುಮಾರ್ ಸ್ಮರಣಾರ್ಥ ದೀಪೋತ್ಸವ ಹಮ್ಮಿಕೊಂಡಿದೆ. ಯಾವುದೇ ಸಂಭಾವನೆ ಪಡೆಯದೇ ಪುನೀತ್ ರಾಜಕುಮಾರ್​ ಈ ಸಂಸ್ಥೆಯ ರಾಯಭಾರಿ ಆಗಿದ್ದರು.

Lamp tributes to puneeth rajkumar
ಪುನೀತ್ ಸ್ಮರಣಾರ್ಥ: ಅಪ್ಪು​ ಸಮಾಧಿ ಎದುರು ದೀಪೋತ್ಸವ

By

Published : Jan 30, 2022, 7:22 AM IST

ಬೆಂಗಳೂರು:ರಾಜ್ಯ ಜೀವನೋಪಾಯ ಇಲಾಖೆಯಡಿ ಬರುವ ಸಂಜೀವಿನಿ ಕೆಎಸ್​​ಆರ್​​ಎಲ್​ಪಿಎಸ್ ಸಂಸ್ಥೆಯು ತನ್ನ ಪ್ರಚಾರ ರಾಯಭಾರಿಯಾಗಿದ್ದ ದಿ.ನಟ ಪುನೀತ್ ರಾಜ್​​ಕುಮಾರ್ ಸ್ಮರಣಾರ್ಥ ಸಹಸ್ರ ದೀಪಗಳನ್ನು ಬೆಳಗಿಸಿ, 'ದೀಪ ನಮನ' ಸಲ್ಲಿಸಿತು. ಪುನೀತ್ ಅವರ ಸಮಾಧಿ ಇರುವ ಕಂಠೀರವ ಸ್ಟುಡಿಯೋದಲ್ಲಿ ಶನಿವಾರ ಸಂಜೆ ಈ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಬ್ಬಂದಿ ಮತ್ತು ನೂರಾರು ಮಹಿಳಾ ಸ್ವಸಹಾಯ ಸಂಘಗಳ ಸದಸ್ಯೆಯರು ಭಾಗಿಯಾಗಿದ್ದರು. ಕಳೆದ ವರ್ಷದ ದೀಪಾವಳಿ ಸಂದರ್ಭದಲ್ಲಿ ಈ ಸಂಸ್ಥೆಯ ಮೂಲಕ ತಯಾರಿಸಿದಂತಹ ಮಣ್ಣಿನ ಹಣತೆಗಳ ವ್ಯಾಪಾರಕ್ಕೆ ದೀಪ ಸಂಜೀವಿನಿ ಎನ್ನುವ ವಿಶಿಷ್ಟ ಉಪಕ್ರಮವನ್ನು ಹಮ್ಮಿಕೊಂಡು, 8 ಮಳಿಗೆಗಳನ್ನು ತೆರೆಯಲಾಗಿತ್ತು. ಇದಕ್ಕೆ ಉತ್ತೇಜನ ನೀಡಲು ಮುಂದೆ ಬಂದಿದ್ದ ಪುನೀತ್ ಪ್ರಚಾರ ರಾಯಭಾರಿಯಾಗಿ, ನಮಗೆ ಬೆಂಬಲ ಕೊಟ್ಟಿದ್ದರು ಎಂದು ನೆನಪಿಸಿಕೊಂಡು ಕಂಬನಿ ಮಿಡಿದರು.

ಅಪ್ಪು​ ಸಮಾಧಿ ಎದುರು ದೀಪೋತ್ಸವ

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಪುನೀತ್ ಅಪಾರ ಸಾಮಾಜಿಕ ಕಳಕಳಿಯನ್ನು ಮೈಗೂಡಿಸಿಕೊಂಡಿದ್ದರಲ್ಲದೇ, ಯುವ ಜನಾಂಗಕ್ಕೆ ಸ್ಫೂರ್ತಿಯ ಸೆಲೆಯಾಗಿದ್ದರು. ಮಹಿಳೆಯರು ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ಸದಾ ಮಿಡಿಯುತ್ತಿದ್ದರು. ಆದರೆ ಇದನ್ನೆಲ್ಲಾ ತೆರೆಯ ಮರೆಯಲ್ಲಿದ್ದುಕೊಂಡು ಮಾಡುತ್ತಿದ್ದರೇ ಹೊರತು, ಪ್ರಚಾರವನ್ನು ಬಯಸುತ್ತಿರಲಿಲ್ಲ ಎಂದು ಮಹಿಳಾ ಸ್ವಸಹಾಯ ಸಂಘಗಳ ಸದಸ್ಯೆಯರು ಸ್ಮರಿಸಿದರು.

ಅಪ್ಪು​ ಸಮಾಧಿ ಎದುರು ದೀಪೋತ್ಸವ

ಸರತಿ ಸಾಲಿನಲ್ಲಿ ನಿಂತು, ಪುನೀತ್ ಸಮಾಧಿಗೆ ಭಾವಪೂರ್ಣ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಜೀವನೋಪಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವ ಕುಮಾರ್, ಎನ್​​ಆರ್​​ಎಲ್​​ಎಂ ನಿರ್ದೇಶಕಿ ಮಂಜುಶ್ರೀ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ:ಪುನೀತ್ ಹೆಸರಲ್ಲಿ ಮತ್ತೊಂದು ಸಮಾಜಮುಖಿ ಕೆಲಸಕ್ಕೆ‌‌ ಮುಂದಾದ ರಾಜ್ ಕುಟುಂಬ!

ABOUT THE AUTHOR

...view details