ಬೆಂಗಳೂರು:ಬಾಲಿವುಡ್ ನಟ ರಿಷಿ ಕಪೂರ್ ನಿಧನಕ್ಕೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗು ಆರೋಗ್ಯ ಸಚಿವ ಶ್ರೀರಾಮುಲು ಸಂತಾಪ ಸೂಚಿಸಿದ್ದಾರೆ.
ರಿಷಿ ಕಪೂರ್ ನಿಧನ: ಡಿಸಿಎಂ ಸವದಿ, ಶ್ರೀರಾಮುಲು ಸಂತಾಪ - ಬಾಲಿವುಡ್ ಸುದ್ದಿ
ಇರ್ಫಾನ್ ಅಗಲಿಕೆಯಿಂದ ಸಾಕಷ್ಟು ನೋವುಂಡ ಭಾರತೀಯ ಚಿತ್ರರಂಗ ಸದ್ಯ ಖ್ಯಾತ ನಟ ರಿಷಿ ಕಪೂರ್ ನಿಧನದಿಂದ ದಿಗ್ಭ್ರಾಂತವಾಗಿದ್ದು, ಸಿನಿ ದ್ರುವತಾರೆಯ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಡಿಸಿಎಂ ಸವದಿ, ಶ್ರೀರಾಮುಲು
ಭಾರತ ಚಿತ್ರರಂಗದ ಮತ್ತೊಂದು ಧ್ರುವ ತಾರೆ ತನ್ನ ಜೀವನಯಾತ್ರೆ ಮುಗಿಸಿದೆ. ಖ್ಯಾತ ನಟ ರಿಷಿ ಕಪೂರ್ ಇಹಲೋಕ ತ್ಯಜಿಸಿದ್ದಾರೆ. ಕುಟುಂಬ ವರ್ಗಕ್ಕೆ, ಅಭಿಮಾನಿಗಳಿಗೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಭಗವಂತ ಕರುಣಿಸಲಿ ಓಂ ಶಾಂತಿ, ಸದ್ಗತಿ ಎಂದು ಲಕ್ಷ್ಮಣ ಸವದಿ ಟ್ವೀಟ್ ಮಾಡಿದ್ದಾರೆ.
ಸಿನಿಮಾ ಕ್ಷೇತ್ರದ ದಂತಕತೆ ರಿಷಿ ಕಪೂರ್ ನಿಧನದಿಂದ ಸಿನಿಮಾ ಜಗತ್ತು ಬಡವಾಗಿದೆ. ಅವರು ಕುಟುಂಬ ವರ್ಗ ಹಾಗು ಸ್ನೇಹ ಬಳಗಕ್ಕೆ ದುಃಖ ಭರಿಸುವ ಶಕ್ತಿ ಕರುಣಿಸಲು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.