ಬೆಂಗಳೂರು: ಪಾದರಾಯನಪುರದ ಲೇಡಿ ಡಾನ್ ಫರ್ಜಾನಾಳ ಮತ್ತೊಂದು ಕರಾಳ ಮುಖದ ಅನಾವರಣವಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.
ಲೇಡಿ ಡಾನ್ ಫರ್ಜಾನಾಳ ಮತ್ತೊಂದು ಕರಾಳಮುಖ ಅನಾವರಣ- ವಿಡಿಯೋ ವೈರಲ್ - Lady Don pharjana video viral news
ಪಾದರಾಯನಪುರ ಗಲಭೆ ನಡೆಯುವ ಮುಂಚೆ ಫರ್ಜಾನಾ ತನ್ನದೇ ಆದ ಗ್ಯಾಂಗ್ವೊಂದನ್ನು ಕಟ್ಟಿಕೊಂಡು ಹುಡುಗರಿಗೆ ಗಾಂಜಾ ಸಪ್ಲೈ ಮಾಡಿ ಹಣ ಗಳಿಸುತ್ತಿದ್ದಳು ಎನ್ನಲಾಗ್ತಿದೆ. ಇವಳನ್ನು ಇದೀಗ ಪೊಲೀಸರು ಕೊರೊನಾ ವಾರಿಯರ್ಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಬಂಧಿಸಿದ್ದಾರೆ. ಆದ್ರೆ ಈಕೆಯ ಕರಾಳಮುಖಡ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಾದರಾಯನಪುರ ಗಲಭೆ ನಡೆಯುವ ಮುಂಚೆ ಫರ್ಜಾನಾ ತನ್ನದೇ ಆದ ಗ್ಯಾಂಗ್ವೊಂದನ್ನು ಕಟ್ಟಿಕೊಂಡು ಹುಡುಗರಿಗೆ ಗಾಂಜಾ ಪೂರೈಸಿ ಹಣ ಗಳಿಸುತ್ತಿದ್ದಳು. ಸದ್ಯ ಪಾದರಾಯನಪುರದಲ್ಲಿ ಕೊರೊನಾ ವಾರಿಯರ್ಸ್ ತಂಡದ ಮೇಲಿನ ಹಲ್ಲೆ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪೊಲೀಸರು ಈಕೆಯನ್ನು ಬಂಧಿಸಿದ್ದಾರೆ. ಬಂಧಿತಳಾಗುವ ಮುಂಚೆ ಯುವಕನೊಬ್ಬನಿಗೆ ಮನೆಯಲ್ಲಿದ್ದ ಅಡುಗೆ ಸೌಟಿನಲ್ಲಿ ಥಳಿಸಿ, ಕಾಲಿನಲ್ಲಿ ಒದೆಯುತ್ತಿರುವ ದೃಶ್ಯವೊಂದು ವೈರಲ್ ಆಗಿದೆ.
ಗೋರಿಪಾಳ್ಯ, ಪಾದರಾಯನಪುರ, ರಾಯಪುರಕ್ಕೆ ಗಾಂಜಾ ಸಪ್ಲೈ ಮಾಡುತ್ತಿರುವ ಫರ್ಜಾನಾ, ಗಾಂಜಾ ವಿಷಯಕ್ಕೆ ಯುವಕನೊಬ್ಬನ ಜೊತೆ ಗಲಾಟೆ ಮಾಡಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಸದ್ಯ ಜೆ.ಜೆ ನಗರ ಪೊಲೀಸರು ಇವಳನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.