ಬೆಂಗಳೂರು: ಬೈಕ್ ಸವಾರನ ಮೇಲೆ ಚಾಲಕಿ ಕಾರು ಹತ್ತಿಸಿರುವ ಘಟನೆ ಬೆಂಗಳೂರಿನ ನಾಗರಭಾವಿಯ ಕೆ.ಕೆ ಲೇಔಟ್‌ನಲ್ಲಿ ನಡೆದಿದೆ. ಹೊಸ ಕಾರು ಚಾಲನೆ ವೇಳೆ ಡಾ.ಲಕ್ಷ್ಮೀ ಎಂಬುವವರು ಬೇಜವಾಬ್ದಾರಿತನ ಮೆರೆದಿದ್ದಾರೆ ಎನ್ನಲಾಗ್ತಿದೆ.
ಕಾರು ಟರ್ನ್ ಮಾಡಲು ಹೋಗಿ ಚಾಲಕಿ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ್ದಾರೆ. ನಂತರ ಬೈಕ್ ಸವಾರ ಕಾರಿನ ಚಕ್ರದ ಬಳಿ ಬಿದ್ದಿದ್ದರು. ಬಳಿಕ ಸವಾರನ ಮೇಲೆಯೇ ಕಾರನ್ನು ಹತ್ತಿಸಿದ್ದಾರೆ. ಕಳೆದ ಶನಿವಾರ(ಮೇ 21) ದಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.