ಬೆಂಗಳೂರು:ಸ್ನೇಹಿತೆಯನ್ನು ಮದುವೆಗೆ ಆಹ್ವಾನಿಸಲು ಅವಳ ಮನೆಗೆ ಬಂದು ಬಟ್ಟೆ ಬದಲಿಸುವ ನೆಪದಲ್ಲಿ ಬೀರುವಿನಲ್ಲಿದ್ದ 11 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಗೆಳತಿಯೇ ಅಪಹರಿಸಿದ ಆರೋಪ ಪ್ರಕರಣ ಇಲ್ಲಿನ ದೇವರಜೀವನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ದೇವರಜೀವನಹಳ್ಳಿ ನಿವಾಸಿ ಆಜಾರ್ ಸಿದ್ದಿಕ್ ಬಂಧಿತ ಆರೋಪಿಯಾಗಿದ್ದಾಳೆ. ಪಾದರಾಯನಪುರ ನಿವಾಸಿಯಾಗಿರುವ ರೋಹಿನಾಜ್ ಎಂಬಾಕೆ ನೀಡಿರುವ ದೂರಿನ ಮೇರೆಗೆ ಆಜಾರ್ ಸಿದ್ದಿಕ್ಳನ್ನು ಪೊಲೀಸರು ಬಂಧಿಸಿದ್ದಾರೆ.
ರೋಹಿನಾಜ್ ಹಾಗೂ ಆಜಾರ್ ಇಬ್ಬರು ಆಪ್ತ ಸ್ನೇಹಿತೆರಾಗಿದ್ದಾರೆ. ಡಿ.14 ರಂದು ಆಜಾರ್, ಅಣ್ಣನ ಮದುವೆ ಸಲುವಾಗಿ ಆಹ್ವಾನ ಪತ್ರಿಕೆ ನೀಡಲು ರೋಹಿನಾಜ್ ಮನೆಗೆ ಬಂದಿದ್ದಳು. ಬಳಿಕ ತನಗೆ ಪಿರಿಯಡ್ಸ್ ಆಗಿದೆ. ಬಟ್ಟೆ ಬದಲಿಸಬೇಕೆಂದು ಹೇಳಿದ್ದಾಳೆ. ರೂಮಿಗೆ ಹೋಗಿ ಬಟ್ಟೆ ಬದಲಾಯಿಸುವಂತೆ ರೋಹಿನಾಜ್ ಹೇಳಿದ್ದಳು.
ಇದರಂತೆ ರೂಂಗೆ ಹೋದ ಆಜಾರ್ ಬಟ್ಟೆ ಬದಲಿಸುವ ನೆಪದಲ್ಲಿ ಬೀರುವಿನ ಲಾಕರ್ನಲ್ಲಿದ್ದ 206 ಗ್ರಾಂ ಚಿನ್ನಾಭರಣ ಕದ್ದಿದ್ದಾಳೆ. ಬಟ್ಟೆ ಬದಲಿಸಿ ಕೆಲ ಹೊತ್ತು ಮನೆಯಲ್ಲೇ ಇದ್ದು ನಂತರ ತೆರಳಿದ್ದಾಳೆ. ಮಾರನೇ ದಿನ ಬೀರುವಿನ ಲಾಕರ್ ಓಪನ್ ಆಗಿರುವುದನ್ನು ಕಂಡ ಮನೆಯವರು ಪರಿಶೀಲಿಸಿದಾಗ ಚಿನ್ನಾಭರಣ ನಾಪತ್ತೆಯಾಗಿರುವುದು ಗೊತ್ತಾಗಿದೆ.