ಬೆಂಗಳೂರು:ರಾಜಧಾನಿಗೆ ಉದ್ಯಾನ ನಗರಿ ಎಂಬ ವಿಶೇಷಣವನ್ನು ಅಂಟಿಸಲು ಕಾರಣವಾಗಿರುವ ಪಾರ್ಕ್ಗಳೆಲ್ಲ ಅಭಿವೃದ್ಧಿಯಿಂದ ದೂರ ಉಳಿದಿವೆ. ಒಂದು ಕಾಲದಲ್ಲಿ ಬೆಂಗಳೂರಿನಲ್ಲಿ ಉದ್ಯಾನವನಗಳೇ ತುಂಬಿದ್ದ ಜಾಗದಲ್ಲಿ ಈಗ ಮುಗಿಲೆತ್ತರದ ಕಟ್ಟಡಗಳನ್ನು ಕಾಣಬಹುದು. ರಸ್ತೆಯೇ ಕಾಣದ ರೀತಿ ಕಾಂಕ್ರಿಟ್ ಕಾಡಾಗಿ ಬೆಳೆದಿದೆ. ಈ ಮಧ್ಯೆ ನಗರದ ತಾಪಮಾನವನ್ನು ನಿಯಂತ್ರಿಸಬಲ್ಲ ಮತ್ತು ಸೌಂದರ್ಯವನ್ನು ಹೆಚ್ಚಿಸಬಲ್ಲ ಉದ್ಯಾನವನಗಳೂ ಇವೆ. ಆದರೆ, ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ.
ಅದಲ್ಲದೆ, ಪಾರ್ಕ್ಗಳ ನಿರ್ವಹಣೆ ಹಾಗೂ ಭೂಗಳ್ಳರಿಂದ ರಕ್ಷಣೆಯೂ ಅಷ್ಟೇ ಸವಾಲಾಗಿದೆ. ಮಳೆ ನೀರುಗಾಲುವೆಗಳು, ಕೆರೆಗಳ ಒತ್ತುವರಿ, ಬಫರ್ ಝೋನ್ಗಳ ಒತ್ತುವರಿ ಎಗ್ಗಿಲ್ಲದೆ ನಡೆದಿದೆ. ಪಾರ್ಕ್ ಜಾಗಗಳು ಸೀಮಿತವಾಗಿರುವುದರಿಂದ ಮೊದಲೇ ಬೇಲಿ (ಫೆನ್ಸಿಂಗ್) ಹಾಕಿ ರಕ್ಷಿಸಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಪಾರ್ಕ್ಗಳ ನಿರ್ವಹಣೆಗೆ ಪ್ರತ್ಯೇಕ ವಿಭಾಗವಿದ್ದರೂ ಪ್ರಯೋಜನ ಇಲ್ಲವಾಗಿದೆ. ಇನ್ನು ಕಬ್ಬನ್ ಪಾರ್ಕ್, ಲಾಲ್ಬಾಗ್ನಂತಹ ಬೃಹತ್ ಉದ್ಯಾನಗಳನ್ನು ತೋಟಗಾರಿಕಾ ಇಲಾಖೆ ನೋಡಿಕೊಳ್ಳುತ್ತಿದೆ.
ರಾಜಧಾನಿಯಲ್ಲಿ ಪಾರ್ಕ್ಗಳ ವಿವರ
ಬಿಬಿಎಂಪಿ ವಲಯ | ಪೂರ್ವ | ಪಶ್ಚಿಮ | ದಕ್ಷಿಣ | ಯಲಹಂಕ | ಬೊಮ್ಮನಹಳ್ಳಿ | ಆರ್.ಆರ್.ನಗರ | ಮಹದೇವಪುರ | ದಾಸರಹಳ್ಳಿ | ಒಟ್ಟು |
ಪಾರ್ಕ್ಗಳ ಸಂಖ್ಯೆ | 278 | 213 | 345 | 112 | 120 | 157 | 26 | 37 | 1,288 |