ಕರ್ನಾಟಕ

karnataka

ETV Bharat / city

ಆಕ್ಸಿಜನ್ ಕೊರತೆ ನೀಗಿಸಲು ಪೈಲಟ್​ ಯೋಜನೆ ಬಗ್ಗೆ ಸರ್ಕಾರದ ಚಿಂತನೆ - ಆಕ್ಸಿಜನ್ ಪೂರೈಕೆ

ರಾಜ್ಯದಲ್ಲಿ ಉಸಿರಾಟದ ಸಮಸ್ಯೆಯಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಭವಿಷ್ಯದಲ್ಲಿ ಆಕ್ಸಿಜನ್ ಕೊರತೆ ಎದುರಾಗದಂತೆ ನೋಡಿಕೊಳ್ಳಲು ಸರ್ಕಾರ ಈಗಾಗಲೇ ಅನ್ಯ ರಾಜ್ಯದೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.

lack of oxygen
ಆಕ್ಸಿಜನ್ ಕೊರತೆ

By

Published : Sep 21, 2020, 5:37 PM IST

ಬೆಂಗಳೂರು:ರಾಜ್ಯದಲ್ಲಿ ಸೋಂಕಿತರಂತೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆಯೂ ಏರುತ್ತಲೇ ಇದೆ. ಅದರಲ್ಲೂ ಕೋವಿಡ್‌-19ನಿಂದ ಬಳಲುತ್ತಿರುವ ರೋಗಿಗಳಿಗೆ ಕೃತಕ ಆಮ್ಲಜನಕದ ತೀವ್ರ ಕೊರತೆ ಎದುರಾಗಿದೆ. ಸಕಾಲಕ್ಕೆ ವೆಂಟಿಲೇಟರ್​ ಮತ್ತು ಆಮ್ಲಜನಕ ಸಿಗದ ಕಾರಣ ರೋಗಿಗಳು ಉಸಿರುಗಟ್ಟಿ ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸೋಂಕಿತರ ಪೈಕಿ ಸುಮಾರು 7,399 ಮಂದಿ ತೀವ್ರ ಉಸಿರಾಟದ ತೊಂದರೆಯಿಂದ (SARI) ಬಳಲುತ್ತಿದ್ದಾರೆ. ವಾತಾವರಣ ಬದಲಾವಣೆಯಿಂದಾಗಿ ಅಸ್ತಮಾ ರೋಗಿಗಳಿಗೂ ಹೆಚ್ಚು ತೊಂದರೆ ಉಂಟಾಗಿದೆ. ಕೋವಿಡ್ ಮತ್ತು ಕೋವಿಡೇತ್ತರ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಮುಂದಿನ‌ ದಿನಗಳಲ್ಲಿ ಆಕ್ಸಿಜನ್ (ಆಮ್ಲಜನಕ) ಕೊರತೆ ಉಂಟಾಗಬಹುದು ಎಂಬ ಕಾರಣಕ್ಕೆ ಸರ್ಕಾರ ಹಲವು ಪೈಲಟ್ ಪ್ರಾಜೆಕ್ಟ್​​​​ಗಳನ್ನು (ಪ್ರಾಯೋಗಿಕ ಯೋಜನೆ) ಪ್ರಾರಂಭಿಸಲು ಚಿಂತನೆ ನಡೆಸಿದೆ. ಇನ್ನು ಪ್ರತಿದಿನ 812 MTಯಷ್ಟು ಆಕ್ಸಿಜನ್ ಪೂರೈಕೆಯಾಗುತ್ತಿದ್ದು, ಈವರೆಗೂ ಕೊರತೆ ಎದುರಾಗಿಲ್ಲ.

ಈ ಬಗ್ಗೆ ಮಾತನಾಡಿರುವ ಆರೋಗ್ಯ ಸಚಿವ ಶ್ರೀರಾಮುಲು, ಕೊರೊನಾ ಹೆಚ್ಚಾದ ನಂತರ ಇದೀಗ ಆಕ್ಸಿಜನ್ ಪೂರೈಕೆ ದಿನನಿತ್ಯ ಅವಶ್ಯಕವಾಗಿದೆ. ಹಲವೆಡೆ ಅದಕ್ಕೆ ಬೇಡಿಕೆ ಹೆಚ್ಚಾಗಿದ್ದು, ನಿತ್ಯ ಖರೀದಿಸಲು ಕಷ್ಟವಾಗುತ್ತಿದೆ. ಹೀಗಾಗಿ, ಎಲ್ಲ ಜಿಲ್ಲಾಸ್ಪತ್ರೆಗಳು ಪೈಲೆಟ್ ಪ್ರಾಜೆಕ್ಟ್​​ಗಳಡಿ ಅಲ್ಲೇ ಆಕ್ಸಿಜನ್‌ಪ್ಲಾಂಟ್ ಹಾಕಿ ಆ ಮೂಲಕ ಸರಬರಾಜು ಮಾಡಬೇಕೆಂದು ತೀರ್ಮಾನಿಸಲಾಗಿದೆ. ಮುಂದಿನ ದಿನಗಳಲ್ಲಿ 5 ಜಿಲ್ಲಾಸ್ಪತ್ರೆಗಳಲ್ಲಿ ಮಾಡಲಾಗುತ್ತದೆ. ಒಂದು ವೇಳೆ ಅದು ಯಶಸ್ವಿಯಾದರೆ ಎಲ್ಲ ಕಡೆಯಲ್ಲೂ ಜಾರಿ ಮಾಡಲಾಗುತ್ತದೆ. ಒಂದೊಮ್ಮೆ ಕೊರತೆ ಎದುರಾದರೆ ಕೇರಳ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳಿಂದ ತರಿಸಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಆಕ್ಸಿಜನ್​ ಕೊರತೆ ನೀಗಿಸಲು ಸರ್ಕಾರ ಕ್ರಮ

ಗುಜರಾತ್ ರಾಜ್ಯದೊಂದಿಗೆ ಒಡಂಬಡಿಕೆ:ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಸದ್ಯಕ್ಕೆ ಇಲ್ಲದೇ ಇರಬಹುದು. ಆದರೆ, ಮುಂದೆ ಕೊರತೆ ಆಗದಂತೆ ಎಚ್ಚರವಹಿಸಲು ಗುಜರಾತ್​ನ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಆಕ್ಸಿಜನ್ ಕೊರತೆ ಎದುರಾದರೆ ಅಲ್ಲಿಂದ ತರಿಸಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ. ಕೇವಲ ಸರ್ಕಾರಿ ಆಸ್ಪತ್ರೆ ಅಲ್ಲದೇ ಖಾಸಗಿ ಆಸ್ಪತ್ರೆಯಲ್ಲಿ ಕೊರತೆಯಾದರೂ ಅವರಿಗೂ ಸರ್ಕಾರವೇ ಸಹಕಾರ ನೀಡಲಿದೆ ಎಂದು ಸಚಿವರು ಭರವಸೆ ನೀಡಿದರು.

ಈ ಹಿಂದೆ ಹಲವು ಆಸ್ಪತ್ರೆಗಳು ಸರಿಯಾದ ಸಮಯಕ್ಕೆ ಆಕ್ಸಿಜನ್ ಪೂರೈಕೆಯಾಗದ ಕಾರಣ ಸಮಸ್ಯೆ ಎದುರಿಸಿದ್ದವು. ಹೀಗಾಗಿ, ಆಯಾ ಜಿಲ್ಲೆಯಲ್ಲೇ ಕೈಗಾರಿಕಾ ವಲಯಗಳ ಸಹಕಾರದೊಂದಿಗೆ ಆಕ್ಸಿಜನ್ ಪೂರೈಕೆಗೆ ವ್ಯವಸ್ಥೆ ಮಾಡಲು ಕ್ರಮ ಜರುಗಿಸಲಾಗಿದೆ ಎಂದು ಮಾಹಿತಿ ನೀಡಿದರು.

ABOUT THE AUTHOR

...view details