ಕರ್ನಾಟಕ

karnataka

ETV Bharat / city

ಕೊಳಗೇರಿ ಪ್ರದೇಶಗಳಲ್ಲಿ ಆರೋಗ್ಯ ಸೇವೆಗೆ 'ಅನಾರೋಗ್ಯ' - ಮೂಲ ಸೌಕರ್ಯಗಳ ಕೊರತೆ

ಸ್ಲಂಗಳಲ್ಲಿ ಚರಂಡಿಗಳಿಲ್ಲದೆ ಮನೆ ಬಳಕೆಯ ನೀರು ಹರಿಬಿಡುವುದರಿಂದ ಗಲೀಜು ನೀರು ಒಂದೆಡೆ ನಿಂತು ಸಾಂಕ್ರಾಮಿಕ ರೋಗ ಹರಡಲು ಕಾರಣವಾಗುತ್ತದೆ. ಕೆಲವೆಡೆ ಕುಡಿಯಲು ಮತ್ತು ಬಳಸಲು ಸಮರ್ಪಕ ನೀರಿನ ಕೊರತೆ ಇದೆ. ಡೆಂಗ್ಯೂ, ಚಿಕೂನ್​ ಗುನ್ಯಾ, ಹೆಚ್​1ಎನ್​1 ಸೇರಿದಂತೆ ಹಲವು ಮಾರಕ ರೋಗಗಳು ಕಾಣಿಸಿಕೊಳ್ಳುತ್ತಿವೆ. ಅವುಗಳ ನಿರ್ಮೂಲನೆಗೆ ಸರ್ಕಾರ ಪಣತೊಡಬೇಕಿದೆ.

Lack of health service in Slum areas
ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಕೊಳಗೇರಿ ಪ್ರದೇಶಗಳ ನಿವಾಸಿಗಳು

By

Published : Sep 29, 2020, 2:11 PM IST

ಬೆಂಗಳೂರು:ನಗರಗಳು ಇರುವಲ್ಲಿ ಸ್ಲಂಗಳು ಇದ್ದೇ ಇರುತ್ತವೆ. ಸ್ಲಂ ಎಂದಾಕ್ಷಣ ಎಲ್ಲರ ಕಣ್ಣ ಮುಂದೆ ಬರುವುದೇ ಅಲ್ಲಿನ ಕೊಳಚೆ ಪ್ರದೇಶ, ಮೂಲ ಸೌಕರ್ಯಗಳ ಕೊರತೆ, ಸುಸಜ್ಜಿತವಲ್ಲದ ಮನೆಗಳು ಇನ್ನೂ ಎನೇನೋ ಊಹೆಗೆ ಬರುತ್ತದೆ. ಅದು ನಿಜ. ಇಂದು ಜಗತ್ತು ಎಷ್ಟೇ ಮುಂದುವರಿದಿದ್ದರೂ ಅತ್ಯಾಧುನಿಕತೆಯಿಂದ ತುಂಬಿ ತುಳುಕುತ್ತಿರುವ ಹೈಟೆಕ್‌ ನಗರಗಳು ಒಂದೆಡೆಯಾದರೆ, ಅದರ ಪಕ್ಕದಲ್ಲೇ ಅಸೌಕರ್ಯಗಳ ಗೂಡಾಗಿರುವ ಸ್ಲಂಗಳತ್ತ ಸರ್ಕಾರ ವಹಿಸುತ್ತಿರುವ ಈಗಿನ ಕಾಳಜಿ ತೀರಾ ಅಲ್ಪ. ಅಲ್ಲದೆ, ಅಂತಹ ಪ್ರದೇಶದಲ್ಲಿ ಆರೋಗ್ಯ ಸೇವೆ ಕೂಡ ಮರೀಚಿಕೆಯಾಗಿದೆ.

ಸರ್ಕಾರ ನಗರ ಪ್ರದೇಶದಲ್ಲಿ ವಾಸಿಸುವ ಕೊಳಗೇರಿ ಜನರಿಗೆ ಸೂಕ್ತ ಆರೋಗ್ಯ ಸೇವೆ ಒದಗಿಸುವುದಕ್ಕೆ ಪ್ರಥಮ ಆದ್ಯತೆ ನೀಡಬೇಕಿದೆ. ಆದರೆ ಸ್ಲಂಗಳಲ್ಲಿ ಆಸ್ಪತ್ರೆಗಳು ಇದ್ದರೂ ಇಲ್ಲದಂತಾಗಿವೆ. ಕುಡಿಯಲು ಮತ್ತು ಬಳಸುವ ನೀರು, ಸೂರು ಮತ್ತು ವಿದ್ಯುತ್‌ಶಕ್ತಿ ಇವುಗಳು ಇಂದಿನ ಅನೇಕ ಸ್ಲಂಗಳಲ್ಲಿ ಅತೀ ಮುಖ್ಯವಾಗಿ ಕಾಣುವಂತ ಪ್ರಬಲ ಸಮಸ್ಯೆಗಳು. ಅವರ ಜೀವನದ ಗುಣಮಟ್ಟ ಎಷ್ಟು ಕೆಳಗಿದೆ ಎಂದು ಅರಿವಾಗುತ್ತದೆ. ಅಂತಹ ಸ್ಲಂಗಳಿಗೆ ಮೂಲ ಸೌಕರ್ಯಗಳನ್ನು ತ್ವರಿತಗತಿಯಲ್ಲಿ ಒದಗಿಸುವುದು ಅಗತ್ಯವಾಗಿದೆ. ಆದರೆ, ಈ ಕೊರೊನಾ ಸಮಯದಲ್ಲಿ ಅವು ಮತ್ತಷ್ಟು ದೂರವಾಗಿವೆ.

ಸ್ಲಂಗಳಲ್ಲಿ ಚರಂಡಿಗಳಲ್ಲದೆ ಮನೆ ಬಳಕೆಯ ನೀರು ಹರಿಬಿಡುವುದರಿಂದ ಗಲೀಜು ನೀರು ಒಂದೆಡೆ ನಿಂತು ಸಾಂಕ್ರಾಮಿಕ ರೋಗ ಹರಡಲು ಕಾರಣವಾಗುತ್ತದೆ. ಕೆಲವೆಡೆ ಕುಡಿಯಲು ಮತ್ತು ಬಳಸಲು ಸಮರ್ಪಕ ನೀರಿನ ಕೊರತೆ ಇದೆ. ಡೆಂಗ್ಯೂ, ಚಿಕೂನ್​ ಗುನ್ಯಾ, ಚ್​1ಎನ್​1 ಸೇರಿದಂತೆ ಹಲವು ಮಾರಕ ರೋಗಗಳು ಕಾಣಿಸಿಕೊಳ್ಳುತ್ತಿವೆ. ಕೊರೊನಾ ಸಮಯದಲ್ಲಿ ಕೊಳೆಗೇರಿಗಳಲ್ಲಿ ಸರ್ಕಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯಲು ಆದ್ಯತೆ ನೀಡಬೇಕಿತ್ತು. ಹಲವೆಡೆ ಆಸ್ಪತ್ರೆ ತೆರೆದಿದ್ದರೂ ಪ್ರಯೋಜನವಿಲ್ಲ. ಕೊರೊನಾ ಭಯದಿಂದ ಯಾವೊಬ್ಬ ಅಧಿಕಾರಿಯೂ ಸ್ಲಂಗಳತ್ತ ಸುಳಿಯುತ್ತಿರಲಿಲ್ಲ. ಇನ್ನು ಕೆಲ ಸ್ಲಂಗಳಲ್ಲಿ ಮೊಬೈಲ್ ಟೀಂ ಮೂಲಕ ಸಮುದಾಯ ಭವನ ಅಥವಾ ಶಾಲೆಯಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಗಿದೆ.

ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಕೊಳಗೇರಿ ಪ್ರದೇಶಗಳ ನಿವಾಸಿಗಳು

ರಾಯಚೂರು ನಗರದ ಕೊಳಗೇರಿ ನಿವಾಸಿಗಳು ಬಡಾವಣೆಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ವೈದ್ಯಕೀಯ ಸೇವೆ ಉತ್ತಮವಾಗಿ ದೊರೆಯುತ್ತಿದೆ. ಆದರೆ, ಕೆಲವೊಂದು ಸಂದರ್ಭದಲ್ಲಿ ಸರಿಯಾಗಿ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ಆರೋಪಗಳಿಂದ್ದು, ಆರೋಗ್ಯ ಸೇವೆಯನ್ನು ಸ್ಲಂ ಪ್ರದೇಶದಲ್ಲಿ ಇನ್ನಷ್ಟು ಹೆಚ್ಚಿಸಬೇಕು ಎನ್ನುವುದು ಸ್ಲಂ ಪ್ರದೇಶದಲ್ಲಿ ವಾಸಿಸುವ ಜನರ ಒತ್ತಾಸೆಯಾಗಿದೆ. ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿ ಸ್ಲಂಗಳಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಪೂರಕ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಆರೋಗ್ಯ ಇಲಾಖೆಯಿಂದ ನಗರದ ಮೂರು ಸ್ಲಂಗಳ ಬಳಿ ಪ್ರಾಥಮಿಕ ಚಿಕಿತ್ಸಾ ಘಟಕಗಳನ್ನು ತೆರೆದಿದ್ದು, ಮಲೇರಿಯಾ ಡೆಂಗ್ಯೂ ಕಾಯಿಲೆಗಳು ಪತ್ತೆಯಾದ ಸಂದರ್ಭದಲ್ಲಿ ಸರಿಯಾದ ಚಿಕಿತ್ಸೆ ನೀಡಿ ರೋಗ ತಡೆಗಟ್ಟಲು ಕ್ರಮಕೈಗೊಳ್ಳಲಾಗುತ್ತಿದೆ. ಒಟ್ಟಿನಲ್ಲಿ ಒಂದೆಡೆ ಕೊಳಗೇರಿ ನಿವಾಸಿಗಳಿಗೆ ಉತ್ತಮ ಚಿಕಿತ್ಸೆ ದೊರೆಯುತ್ತಿದ್ದರೆ, ಮತ್ತೆ ಕೆಲವೆಡೆ ಆರೋಗ್ಯ ಸೇವೆ ಎಂಬುದು ಮರೀಚಿಕೆಯಾಗಿದೆ.

ABOUT THE AUTHOR

...view details