ಕರ್ನಾಟಕ

karnataka

ETV Bharat / city

ದೊಡ್ಡಬಳ್ಳಾಪುರ: ಬ್ಲ್ಯಾಕ್ ಫಂಗಸ್ ಬಂದಿರುವ ಸಂಶಯದಲ್ಲಿ ನೇಣಿಗೆ ಶರಣಾದ ಕಾರ್ಮಿಕ - ದೊಡ್ಡಬಳ್ಳಾಪುರ ನಗರದ ವಿದ್ಯಾನಗರ

ಕೊರೊನಾ ಸೋಂಕಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗಿ ಮನೆಗೆ ಬಂದಿದ್ದ ವ್ಯಕ್ತಿ, ಬ್ಲ್ಯಾಕ್ ಫಂಗಸ್ ಬಗ್ಗೆ ತಿಳಿದುಕೊಂಡಿದ್ದ. ಈತ ತನಗೂ ಬ್ಲ್ಯಾಕ್ ಫಂಗಸ್ ಬಂದಿರುವ ಬಗ್ಗೆ ಸಂಶಯಗೊಂಡಿದ್ದ, ಇದರಿಂದ ಖಿನ್ನತೆಗೆ ಒಳಗಾಗಿ ನೇಣಿಗೆ ಶರಣಾಗಿದ್ದಾನೆ.

labor-surrendered-to-sucide-for-suspicion-of-black-fungus
ಬ್ಲಾಕ್ ಫಂಗಸ್ ಬಂದಿರುವ ಸಂಶಯದಲ್ಲಿ ನೇಣಿಗೆ ಶರಣಾದ ಕಾರ್ಮಿಕ

By

Published : May 27, 2021, 10:31 PM IST

Updated : May 27, 2021, 11:02 PM IST

ದೊಡ್ಡಬಳ್ಳಾಪುರ:ಕೊರೊನಾ ಸೋಂಕಿಗೆ ತುತ್ತಾಗಿದ್ದ ಕಾರ್ಮಿಕನೊಬ್ಬ ಚಿಕಿತ್ಸೆ ಪಡೆದು ಗುಣಮುಖನಾಗಿ ಮನೆಗೆ ಬಂದಿದ್ದ. ಈ ನಡುವೆ ಬ್ಲ್ಯಾಕ್ ಫಂಗಸ್ ಗುಣಲಕ್ಷಣಗಳು ತನ್ನಲ್ಲಿ ಕಾಣಿಸಿಕೊಂಡಿವೆ ಎಂದು ಖಿನ್ನತೆಗೊಳಗಾದ ಆತ ನೇಣಿಗೆ ಶರಣಾಗಿದ್ದಾನೆ.

ಓದಿ: ತಜ್ಞರ ಸಲಹೆ ಪಡೆಯದೇ ಸ್ಟಿರಾಯ್ಡ್ ಕೊಡುವ ಸಚಿವ ಸುಧಾಕರ್ ನಿಲುವು ಅಪಾಯಕಾರಿ: ಮಹದೇವಪ್ಪ

ದೊಡ್ಡಬಳ್ಳಾಪುರ ನಗರದ ವಿದ್ಯಾನಗರ ದಲ್ಲಿ ಘಟನೆ ನಡೆದಿದ್ದು, ಮೃತನನ್ನು ನೇಯ್ಗೆ ಕಾರ್ಮಿಕ ಕೆ.ವಿ. ರವೀಂದ್ರ (58) ಎಂದು ಬಂದಿದೆ. ಈತ ವಾರದ ಹಿಂದೆಯಷ್ಟೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಕೇರ್ ಸೆಂಟರ್ ನಲ್ಲಿ ಮೂರು ದಿನ ಚಿಕಿತ್ಸೆ ಪಡೆದು ರಾತ್ರೋರಾತ್ರಿ ದೊಡ್ಡಬಳ್ಳಾಪುರದಲ್ಲಿ ತನ್ನ ಮನೆಯನ್ನು ಸೇರಿಕೊಂಡಿದ್ದಾನೆ.

ನಂತರ ಸೋಂಕಿನ ಲಕ್ಷಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಮನೆಯವರ ಒತ್ತಾಯದಿಂದ ಮತ್ತೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದಾಗ ಕೊರೊನಾ ಲಕ್ಷಣ ಕಂಡು ಬಂದಿದೆ. ಬಳಿಕ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗಿ ಮನೆಗೆ ಬಂದಿದ್ದ. ಈ ನಡುವೆ ಮಾಧ್ಯಮಗಳಲ್ಲಿ ಬ್ಲ್ಯಾಕ್ ಫಂಗಸ್ ಬಗ್ಗೆ ತಿಳಿದುಕೊಂಡಿದ್ದ ರವೀಂದ್ರ ತನಗೂ ಬ್ಲ್ಯಾಕ್ ಫಂಗಸ್ ಬಂದಿರುವ ಬಗ್ಗೆ ಸಂಶಯಗೊಂಡಿದ್ದ, ಇದರಿಂದ ಖಿನ್ನತೆಗೆ ಒಳಗಾಗಿದ್ದಾನೆ.

ಬುಧವಾರ ರಾತ್ರಿ ಮನೆ ಮಂದಿ ಎಲ್ಲಾ ಊಟ ಮಾಡಿ ನಿದ್ರಿಸಿದ ನಂತರ ಮಗ್ಗದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ವಿಷಯ ತಿಳಿದ ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ವೈದ್ಯಕೀಯ ಪರೀಕ್ಷೆ ಮಾಡಿಸಿ ಶವವನ್ನು ದಹನ ಕ್ರಿಯೆಗಾಗಿ ನಗರಾಡಳಿತಕ್ಕೆ ಒಪ್ಪಿಸಿದ್ದಾರೆ‌.

Last Updated : May 27, 2021, 11:02 PM IST

ABOUT THE AUTHOR

...view details