ಬೆಂಗಳೂರು : ಒಂದೆಡೆ ರಾಜ್ಯಸಭೆ ಚುನಾವಣೆಗೆ ಜೆಡಿಎಸ್ನಿಂದ ಕಣಕ್ಕಿಳಿದಿರುವ ಡಿ. ಕುಪೇಂದ್ರ ರೆಡ್ಡಿ ಅವರು ಮತಯಾಚನೆಯಲ್ಲಿ ನಿರತರಾಗಿದ್ದಾರೆ. ಮತ್ತೊಂದೆಡೆ ಅವರು ರಾಜಕಾರಣಿಗಳಿಗೆ ಕೋಟಿ, ಕೋಟಿ ಸಾಲ ನೀಡಿರುವ ಬಗ್ಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿ ವಿವರದಲ್ಲಿ ಬೆಳಕಿಗೆ ಬಂದಿದೆ.
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಕುಟುಂಬದವರಿಗೆ ಕುಪೇಂದ್ರ ರೆಡ್ಡಿ ಅವರು ಕೋಟ್ಯಂತರ ರೂ. ಸಾಲ ಕೊಟ್ಟಿದ್ದಾರೆ. ದೇವೇಗೌಡರ ಪುತ್ರ ಹೆಚ್.ಡಿ.ರಮೇಶ್ ಅವರಿಗೆ 3.90 ಕೋಟಿ ರೂ., ಹೆಚ್.ಡಿ. ರೇವಣ್ಣ ಪತ್ನಿ ಭವಾನಿ ರೇವಣ್ಣಗೆ 2 ಕೋಟಿ ರೂ., ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ 1 ಕೋಟಿ ರೂ., ಹೆಚ್.ಡಿ. ರೇವಣ್ಣ ಪುತ್ರ ಸೂರಜ್ ರೇವಣ್ಣಗೆ 5.80 ಕೋಟಿ ರೂ. ನೀಡಿದ್ದಾರೆ.