ಬೆಂಗಳೂರು :ರಾಜ್ಯದ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಕೆ-ಟಿಇಟಿ ಪರೀಕ್ಷೆ ಇಂದು ಯಶಸ್ವಿಯಾಗಿ ನಡೆದಿದೆ.
ರಾಜ್ಯದಲ್ಲಿ ಯಶಸ್ವಿಯಾಗಿ ನಡೆದ ಕೆ-ಟಿಇಟಿ ಪರೀಕ್ಷೆ ; ಶೇ.84ನಷ್ಟು ಅಭ್ಯರ್ಥಿಗಳು ಭಾಗಿ - ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಕೆ-ಟಿಇಟಿ ಪರೀಕ್ಷೆ
ಕೊರೊನಾ ಕಾರಣಕ್ಕೆ ಹಲವು ಮುಂಜಾಗ್ರತಾ ಕ್ರಮ ಕೈಗೊಂಡು ಇಲಾಖೆ ಪರೀಕ್ಷೆ ನಡೆಸಿದೆ. 2,44,692 ಅಭ್ಯರ್ಥಿಗಳು ಈ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು..
ಪರೀಕ್ಷೆ
ಹಲವು ಬಾರಿ ದಿನಾಂಕ ನಿಗದಿಯಾಗಿ ಮುಂದೂಡಲ್ಪಟ್ಟಿದ್ದ ಪರೀಕ್ಷೆ ಇಂದು ನಡೆದಿದ್ದು, ಶೇ.84ರಷ್ಟು ಅಭ್ಯರ್ಥಿಗಳು ಹಾಜರಾಗಿದ್ದಾರೆ. ಕೊರೊನಾ ಕಾರಣಕ್ಕೆ ಹಲವು ಮುಂಜಾಗ್ರತಾ ಕ್ರಮ ಕೈಗೊಂಡು ಇಲಾಖೆ ಪರೀಕ್ಷೆ ನಡೆಸಿದೆ. 2,44,692 ಅಭ್ಯರ್ಥಿಗಳು ಈ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು.
ಪೇಪರ್-1ರಲ್ಲಿ 74,976 ಅಭ್ಯರ್ಥಿಗಳ ಪೈಕಿ 57,134 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. 17,842 ಗೈರು ಹಾಜರಾಗಿದ್ದಾರೆ. ಪೇಪರ್-2ರಲ್ಲಿ 1,69,716 ಅಭ್ಯರ್ಥಿಗಳ ಪೈಕಿ 1,47,307 ಹಾಜರಾಗಿದ್ದು. 22,409 ಮಂದಿ ಗೈರಾಗಿದ್ದಾರೆ. ಶೇ.84ರಷ್ಟು ಹಾಜರಾಗಿದ್ದು ಶೇ.16 ರಷ್ಟು ಗೈರು ಹಾಜರಾಗಿದ್ದಾರೆ.