ಬೆಂಗಳೂರು:ಸೇವಾ ಸಿಂಧು ಇ-ಪಾಸ್ ಹೊಂದಿರುವವರಿಗೆ ಅಂತಾರಾಜ್ಯ ಸಾರಿಗೆ ಸೌಲಭ್ಯ ಆರಂಭಿಸಲು ಕೆಎಸ್ಆರ್ಟಿಸಿ ನಿಗಮ ಮುಂದಾಗಿದೆ. ಸಾಮಾನ್ಯ ಸಾರಿಗೆ, ನಾನ್ ಎಸಿ ಸ್ಲೀಪರ್, ರಾಜಹಂಸ ಬಸ್ ಸೇವೆ ಆರಂಭವಾಗಲಿದ್ದು, ಹೊರ ರಾಜ್ಯಗಳಿಗೆ ಬಸ್ಗಳು ತೆರಳಲಿವೆ. ಒಂದು ಬಸ್ನಲ್ಲಿ ಶೇ 50ರಷ್ಟು ಪ್ರಯಾಣಿಕರಿಗೆ ಆದ್ಯತೆ ನೀಡಲಾಗಿದೆ. ಫೋನ್ ಕಾಲ್ ಮೂಲಕ ರಿಜಿಸ್ಟರ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಸೇವಾಸಿಂಧು ಇ-ಪಾಸ್ ಹೊಂದಿರುವವರಿಗೆ ಅಂತಾರಾಜ್ಯ ಸಾರಿಗೆ ಸೌಲಭ್ಯ: ಸಹಾಯವಾಣಿ ಇಲ್ಲಿವೆ.. - ksrtc helpline
ಸೇವಾಸಿಂಧು ಪಾಸ್ ಹೊಂದಿರುವವರಿಗೆ ಅಂತಾರಾಜ್ಯ ಸಾರಿಗೆ ಸೌಲಭ್ಯ ಕಲ್ಪಿಸಲು ಕೆಎಸ್ಆರ್ಟಿಸಿ ಮುಂದಾಗಿದ್ದು, ಮೇ 11ರಿಂದ ಜಾರಿಗೆ ಬರುವಂತೆ ಸಹಾಯವಾಣಿಯನ್ನು ತೆರೆದಿದೆ.
ಕೆಎಸ್ಆರ್ಟಿಸಿ
ಇನ್ನು ಬಸ್ ಹೊರಡಲು ನಿಗದಿತ ಪ್ರಯಾಣಿಕರು ಭರ್ತಿಯಾಗಬೇಕು. ಈಗ ಹೊರ ರಾಜ್ಯಕ್ಕೆ ತೆರಳುವ ಪ್ರತಿಯೊಬ್ಬರಿಗೂ ವೈದ್ಯಕೀಯ ತಪಾಸಣೆ ಕಡ್ಡಾಯ ಮಾಡಲಾಗಿದೆ. ಕೆಎಸ್ಆರ್ಟಿಸಿ ನಿಗಮವು ಮೇ 11ರಿಂದ ಜಾರಿಗೆ ಬರುವಂತೆ ಈ ಕೆಳಗಿನಂತೆ ಸಹಾಯವಾಣಿ ತೆರೆದಿದೆ.
- ತಮಿಳುನಾಡು/ಪಾಂಡಿಚೇರಿ: 7760990100, 7760990560, 7760990034, 7760990035, 7760991295
- ಆಂಧ್ರಪ್ರದೇಶ/ತೆಲಂಗಾಣ: 7760990561, 7760990532, 7760990955, 7760990530, 7760990967
- ಕೇರಳ: 7760990287, 7760990988, 7760990531, 6366423895, 6366423896
ಸೇವಾಸಿಂಧು ಹೊಂದಿರೋ ಪ್ರಯಾಣಿಕರು ಹೆಚ್ಚಿನ ಮಾಹಿತಿಗಾಗಿ ಮೇಲಿನ ಸಂಖ್ಯೆಗೆ ಸಂಪರ್ಕಿಸಿ ಪ್ರಯಾಣ ಖಾತ್ರಿ ಪಡಿಸಿಕೊಳ್ಳಬೇಕೆಂದು ಕೆಎಸ್ಆರ್ಟಿಸಿ ಪ್ರಕಟಣೆ ಹೊರಡಿಸಿದೆ.