ಕರ್ನಾಟಕ

karnataka

ETV Bharat / city

ಆಪರೇಷನ್​ಗೆಂದು ತಂದಿದ್ದ ಹಣ ಕಳ್ಕೊಂಡು ಕಣ್ಣೀರಿಟ್ಟ ಪ್ರಯಾಣಿಕ... ಹುಡುಕಿ ಹಿಂದಿರುಗಿಸಿದ KSRTC ಸಿಬ್ಬಂದಿ - ಮಂಡ್ಯ

ಬ್ಯಾಗಿನಲ್ಲಿ ಸ್ಕ್ಯಾನಿಂಗ್ ರಿಪೋರ್ಟ್ ಮತ್ತು ಶಸ್ತ್ರಚಿಕಿತ್ಸೆಗೆ ತಂದಿದ್ದ 50500 ರೂ. ಹಣವನ್ನು ಬಸ್​ನಲ್ಲಿ ಬಿಟ್ಟು ಹೋಗಿದ್ದೇವೆ. ಇದನ್ನು ದಯವಿಟ್ಟು ಹುಡುಕಿಸಿ ಕೊಡಿ ಎಂದು ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ ಸಹಾಯಕ ಸಂಚಾರ ಅಧೀಕ್ಷಕ ಲಕ್ಷ್ಮೇಗೌಡರ ಬಳಿ ಬಂದು ಕಣ್ಣೀರಿಟ್ಟಿದ್ದಾರೆ.

ಮಾನವೀಯತೆ ಮೆರೆದ ಕೆಎಸ್​ಆರ್​ಟಿಸಿ ಸಿಬ್ಬಂದಿ
ಮಾನವೀಯತೆ ಮೆರೆದ ಕೆಎಸ್​ಆರ್​ಟಿಸಿ ಸಿಬ್ಬಂದಿ

By

Published : Jul 31, 2021, 12:18 AM IST

ಬೆಂಗಳೂರು:ಪ್ರಯಾಣಿಕರು ಬಸ್ಸಿನಲ್ಲಿ ಕಳೆದು ಕೊಂಡಿದ್ದ 50,500 ಹಣ ಮತ್ತು ವಸ್ತುಗಳನ್ನು ಹುಡುಕಿಸಿ, ಸಂಬಂಧಪಟ್ಟವರಿಗೆ ತಲುಪಿಸುವ ಮೂಲಕ ಕೆ.ಎಸ್.ಆರ್.ಟಿ.ಸಿ ಅಧಿಕಾರಿ ಸಿಬ್ಬಂದಿಗಳು ಮಾನವೀಯತೆ ಮೆರೆದಿದ್ದಾರೆ.

ಶುಕ್ರವಾರ ಬೆಳಗ್ಗೆ ಇಬ್ಬರು ಪ್ರಯಾಣಿಕರು ಬಸ್​ ಸಂಖ್ಯೆ ಕೆಎ11 ಎಫ್ 0465 ರಲ್ಲಿ ಮಂಡ್ಯದಿಂದ ಬೆಂಗಳೂರಿನ ಮೈಸೂರು ಬಸ್ ನಿಲ್ದಾಣಕ್ಕೆ ಪ್ರಯಾಣ ಮಾಡಿದ್ದರು. ಪ್ರಯಾಣಿಕರು ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗಾಗಿ ಬಂದಿದ್ದರು. ಬಸ್ ಇಳಿದು ಆಟೋದಲ್ಲಿ ಹೋಗುವಾಗ ಮಾರ್ಗ ಮದ್ಯೆ ತಮ್ಮ ಹಣದ ಮತ್ತು ಸ್ಕ್ಯಾನಿಂಗ್ ರಿಪೋರ್ಟ್ ನೆನಪಾಗಿ ಮರಳಿ ಅದೇ ಆಟೋದಲ್ಲಿ ಬಸ್‌ ನಿಲ್ದಾಣಕ್ಕೆ ಬಂದು ಹಣಕಳೆದುಕೊಂಡಿರುವುದಾಗು ತಿಳಿಸಿ ಗೋಳಾಡಿದ್ದಾರೆ.

ಬ್ಯಾಗಿನಲ್ಲಿ ಸ್ಕ್ಯಾನಿಂಗ್ ರಿಪೋರ್ಟ್ ಮತ್ತು ಶಸ್ತ್ರಚಿಕಿತ್ಸೆಗೆ ತಂದಿದ್ದ 50500 ರೂ. ಹಣವನ್ನು ಬಸ್​ನಲ್ಲಿ ಬಿಟ್ಟು ಹೋಗಿದ್ದೇವೆ. ಇದನ್ನು ದಯವಿಟ್ಟು ಹುಡುಕಿಸಿ ಕೊಡಿ ಎಂದು ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ ಸಹಾಯಕ ಸಂಚಾರ ಅಧೀಕ್ಷಕ ಲಕ್ಷ್ಮೇಗೌಡರ ಬಳಿ ಬಂದು ಕಣ್ಣೀರಿಟ್ಟಿದ್ದಾರೆ.

ತಕ್ಷಣವೇ ಲಕ್ಷ್ಮೇಗೌಡ ಅವರು ಮಂಡ್ಯ ಘಟಕದ ಘಟಕ ವ್ಯವಸ್ಥಾಪಕರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಬಸ್‌ ಚಾಲಕ ಮಹೇಶ್ ಹಾಗೂ ನಿರ್ವಾಹಕ ಸೋಮಶೇಖರಪ್ಪ ಮೊಬೈಲ್ ಸಂಖ್ಯೆಯನ್ನು ಪಡೆದು, ಪ್ರಯಾಣಿಕರು ಬಸ್ಸಿನಲ್ಲಿ ಸ್ಕ್ಯಾನಿಂಗ್ ರಿಪೋರ್ಟ್​ ಮತ್ತು ಶಸ್ತ್ರ ಚಿಕಿತ್ಸೆಗೆಂದು ತಂದಿದ್ದ 50,500 ರೂ ಹಣವಿರುವ ಬ್ಯಾಗ್​ ಹಲ್ಲೆ ಬಿಟ್ಟಿದ್ದಾರೆ. ಹುಡುಕಿ ಎಂದು ಹೇಳಿದ್ದಾರೆ.

ನಿರ್ವಾಹಕ ಸೋಮಶೇಖರಪ್ಪ ಬ್ಯಾಗ್​ ತೆಗೆದು ಹಣ ಮತ್ತು ಸ್ಕ್ಯಾನಿಂಗ್ ರಿಪೋರ್ಟ್ ಇರುವುದಾಗಿ ಖಚಿತಪಡಿಸಿದ್ದಾರೆ. ನಂತರ ಚನ್ನಪಟ್ಟಣ ಘಟಕ ವ್ಯವಸ್ಥಾಪಕರಿಂದ ಪೂರ್ಣ ಪ್ರಮಾಣದಲ್ಲಿ ಹಣವನ್ನು ಲೆಕ್ಕಾಚಾರ ಮಾಡಿ, ಮಂಡ್ಯದಲ್ಲಿ ಪ್ರಯಾಣಿಕರ ಮಗಳಿಗೆ ಹಣವನ್ನು ಮತ್ತು ಸ್ಕ್ಯಾನಿಂಗ್ ರಿಪೋರ್ಟ್ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಇದನ್ನು ಓದಿ:ಬೈಕ್​ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕೆರೆಗೆ ಉರುಳಿದ ಬಸ್

ABOUT THE AUTHOR

...view details