ಪ್ರಯಾಣಿಕರ ಗಮನಕ್ಕೆ: KSRTC ಲಗೇಜ್ ದರ ಏರಿಕೆ; ಡಿ.10 ರಿಂದ ಹೊಸ ದರ ಜಾರಿ
ಪ್ರಯಾಣಿಕರು ಲಗೇಜ್ ತೆಗೆದುಕೊಂಡು ಹೋದರೆ ಪ್ರತ್ಯೇಕ ಹಣ ಪಾವತಿಸಬೇಕಾಗುತ್ತದೆ. ಶೇ.10 ರಷ್ಟು ಲಗೇಜ್ ದರ ಪರಿಷ್ಕರಣೆ ಮಾಡಲಾಗಿದೆ. ಪ್ರತಿ ಸ್ಟೇಜ್ ಆಧಾರದ ಮೇಲೆ ದರ ನಿಗದಿಪಡಿಸಲಾಗಿದೆ.
ಕೆಎಸ್ಆರ್ಟಿಸಿ , ksrtc
By
Published : Dec 2, 2021, 4:57 PM IST
ಬೆಂಗಳೂರು: ಆಟೋ ಪ್ರಯಾಣ ದರ ಏರಿಕೆ ಬೆನ್ನಲ್ಲೇ ಸಾರ್ವಜನಿಕರಿಗೆ ಕೆಎಸ್ಆರ್ಟಿಸಿಯಿಂದಲೂ ದರ ಏರಿಕೆ ಶಾಕ್ ನೀಡಿದೆ. ಲಗೇಜ್ ದರ ಪರಿಷ್ಕರಿಸಿ, ಡಿಸೆಂಬರ್ 10 ರಿಂದಲೇ ಜಾರಿ ಮಾಡಲು ಕೆಎಸ್ಆರ್‌ಟಿಸಿ ಆದೇಶ ಹೊರಡಿಸಿದೆ.
ಆದೇಶ ಪ್ರತಿ
ಕೆಎಸ್ಆರ್ಟಿಸಿ ಲಗೇಜ್ ದರ ಏರಿಕೆ: ಪ್ರಯಾಣ ದರ ಅಲ್ಲದೆಯೇ, ಪ್ರಯಾಣಿಕರು ಲಗೇಜ್ ತೆಗೆದುಕೊಂಡು ಹೋದರೆ ಪ್ರತ್ಯೇಕ ಹಣ ಪಾವತಿಸಬೇಕಾಗುತ್ತದೆ. ಪ್ರತಿ ಸ್ಟೇಜ್ ಆಧಾರದ ಮೇಲೆ ದರ ನಿಗದಿಪಡಿಸಲಾಗಿದೆ. 'ಕೆಎಸ್‌ಆರ್‌ಟಿಸಿ ಲಾಜಿಸ್ಟಿಕ್ಸ್' ಸೇವೆಗಳನ್ನು ಆರಂಭಿಸಲಾಗಿದ್ದು, ಈ ವ್ಯವಸ್ಥೆಯಲ್ಲಿ ಹೊಸ ತಂತ್ರಾಂಶ ಬಳಕೆ ಮೂಲಕ ಪ್ರಯಾಣಿಕ ರಹಿತ ಲಗೇಜ್‌ಗಳನ್ನು ಒಂದು ಬಸ್ ನಿಲ್ದಾಣದಿಂದ ಮತ್ತೊಂದು ಬಸ್ ನಿಲ್ದಾಣಕ್ಕೆ ವ್ಯವಸ್ಥಿತವಾಗಿ ಕಳುಹಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.
ಈ ವ್ಯವಸ್ಥೆಯ ಅನುಷ್ಠಾನದಲ್ಲಿ ಹೊರಗುತ್ತಿಗೆ ಮೇರೆಗೆ ತಂತ್ರಾಂಶ ಅಭಿವೃದ್ಧಿಗೆ ಹಾಗೂ ವಹಿವಾಟು ನಡೆಸುವ ಏಜೆನ್ಸಿಯವರನ್ನು ಆಯ್ಕೆಗೊಳಸಿ ಆ ಮೂಲಕ ನಿರ್ವಹಣೆ ಮಾಡಲಾಗುತ್ತದೆ. ಈ ವ್ಯವಸ್ಥೆಯ ಅನುಷ್ಠಾನಕ್ಕೆ ಪ್ರತ್ಯೇಕ ದರಪಟ್ಟೆಯನ್ನು ಜಾರಿಗೆ ತರಲಾಗಿದೆ ಎಂದು ಕೆಎಸ್ಆರ್ಟಿಸಿ ಪ್ರಕಟಿಸಿದೆ. ಇದೇ ದರವನ್ನು ಪ್ರಯಾಣಿಕ ಸಹಿತ ಲಗೇಜ್ಗಳ ಸಾಗಾಣಿಕೆಗೂ ವಿಧಿಸಲಾಗಿದೆ.
KSRTC Luggage price Increase : ನೂತನ ದರ ಮತ್ತು ಹಿಂದಿನ ದರದ ಮಾಹಿತಿ ಈ ಕೆಳಗಿನಂತಿದೆ.