ಬೆಂಗಳೂರು: ಆರನೇ ವೇತನ ಆಯೋಗದ ಶಿಫಾರಸುಗಳು ಜಾರಿಯಾಗಲೇಬೇಕೆಂದು ಪಟ್ಟು ಹಿಡಿದಿರುವ ನೌಕರರು, ಸರ್ಕಾರ ಕೂಡಲೇ ಕ್ರಮ ಕೈಗೊಂಡ್ರೆ ನಾವು ಒಂದೇ ಗಂಟೆಯಲ್ಲಿ ಮುಷ್ಕರ ಕೈ ಬಿಡುತ್ತೇವೆ ಎಂದು ಕೆಎಸ್ಆರ್ಟಿಸಿ ನೌಕರರ ಒಕ್ಕೂಟದ ಅಧ್ಯಕ್ಷ ಆರ್.ಚಂದ್ರಶೇಖರ್ ಹೇಳಿದ್ದಾರೆ.
'ಆರನೇ ವೇತನ ಆಯೋಗ ಜಾರಿಯಾದರೆ ಒಂದೇ ಗಂಟೆಯಲ್ಲಿ ಮುಷ್ಕರ ವಾಪಸ್'
ಸರ್ಕಾರದ ಎಚ್ಚರಿಕೆಗೂ, ಬೆದರಿಕೆಗೂ ಬಗ್ಗದ ಸಾರಿಗೆ ನೌಕರರು ಮುಷ್ಕರವನ್ನ ಮುಂದುವರೆಸಿದ್ದಾರೆ. ಆರನೇ ವೇತನ ಆಯೋಗದ ಶಿಫಾರಸುಗಳು ಜಾರಿಯಾಗಬೇಕೆಂದು ಪಟ್ಟು ಹಿಡಿದಿದ್ದಾರೆ.
'ಆರನೇ ವೇತನ ಆಯೋಗ ಜಾರಿಯಾದರೆ ಒಂದೇ ಗಂಟೆಯಲ್ಲಿ ಮುಷ್ಕರ ವಾಪಸ್'
ನಾವು ಪ್ರತಿಭಟನೆಯನ್ನು ಯಾವುದೇ ಕಾರಣಕ್ಕೂ ಕೈಬಿಡೋದಿಲ್ಲ. ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸಲೇಬೇಕು. ನಾಳೆ ಇನ್ನೂ ದೊಡ್ಡಮಟ್ಟದಲ್ಲಿ ಮುಷ್ಕರ ಆಗುತ್ತದೆ. ನಮಗೆ ಹೋರಾಟ ಮಾಡಲೇಬೇಕಂತ ಇಲ್ಲ. ಆರನೇ ವೇತನ ಆಯೋಗ ಜಾರಿಯಾದರೆ ಮುಷ್ಕರ ಕೈಬಿಡುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.