ಬೆಂಗಳೂರು:ಕೊರೊನಾ ಸೋಂಕಿನ 1 ಮತ್ತು 2ನೇ ಅಲೆಯಲ್ಲಿ ಸಾರಿಗೆ ನಿಗಮದ ನೌಕರರು ಮೃತಪಟ್ಟಿದ್ದರು. ಮೃತಪಟ್ಟ ಒಟ್ಟು 90 ಮಂದಿ ನೌಕರರ ನಾಮ ನಿರ್ದೇಶಿತರಿಗೆ ಸಂಸ್ಥೆಯಿಂದ 7 ಕೋಟಿ ರೂ. ಪಾವತಿಸಲಾಗಿದೆ ಎಂದು ಸಾರಿಗೆ ಸಂಸ್ಥೆ ಹೇಳಿದೆ.
ನೌಕರರ ಕುಟುಂಬ ಕಲ್ಯಾಣ ಯೋಜನಾ ನಿಧಿ ರೂ. 2.70 ಕೋಟಿ, ಭವಿಷ್ಯ ನಿಧಿ ರೂ. 7.18 ಕೋಟಿ, ಐಚ್ಛಿಕ ಭವಿಷ್ಯ ನಿಧಿ ರೂ. 72 ಲಕ್ಷ, ಗಳಿಕೆ ರಜೆ ನಗದೀಕರಣ ರೂ. 1.61 ಕೋಟಿ ಹಾಗೂ ವೈದ್ಯಕೀಯ ವೆಚ್ಚದ ಮೊತ್ತ 15 ಲಕ್ಷ ರೂ. ಸೇರಿ ಒಟ್ಟಾರೆ ರೂ. 19.36 ಕೋಟಿ ಪಾವತಿಸಲಾಗಿದೆ ಎಂದು ಸಾರಿಗೆ ಸಂಸ್ಥೆ ಸ್ಪಷ್ಟನೆ ನೀಡಿದೆ.