ಕರ್ನಾಟಕ

karnataka

ETV Bharat / city

ಇಂಡಿಯಾ-ಸೌತ್ ಆಫ್ರಿಕಾ ನಡುವಿನ ಟಿ-20 ಪಂದ್ಯದ ಆದಾಯ ನೆರೆ ಪರಿಹಾರಕ್ಕೆ: ಕೆಎಸ್​ಸಿಎ ನಿರ್ಧಾರ?

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಭಾನುವಾರ ನಡೆಯಲಿರುವ ಟಿ-20 ಪಂದ್ಯಾವಳಿಯಿಂದ ಬರುವ ಆದಾಯವನ್ನು ರಾಜ್ಯದ ನೆರೆಪೀಡಿತ ಪ್ರದೇಶದ ಪುನರ್ವಸತಿಗೆ ಕೆಎಸ್​ಸಿಎ ನೆರವು ನೀಡಲಿದೆ ಎಂದು ತಿಳಿದು ಬಂದಿದೆ.

ಕೆಎಸ್​ಸಿಎ

By

Published : Sep 20, 2019, 8:36 PM IST

ಬೆಂಗಳೂರು: ಭಾರತ ಹಾಗು ದಕ್ಷಿಣ ಆಫ್ರಿಕಾ ನಡುವೆ ಭಾನುವಾರ ನಡೆಯಲಿರುವ ಟಿ-20 ಪಂದ್ಯಾವಳಿಯಿಂದ ಬರುವ ಆದಾಯವನ್ನು ರಾಜ್ಯದ ನೆರೆಪೀಡಿತ ಪ್ರದೇಶದ ಪುನರ್ವಸತಿಗೆ ಕೆಎಸ್​ಸಿಎ ನೆರವು ನೀಡಲಿದೆ ಎಂದು ತಿಳಿದು ಬಂದಿದೆ.

ಭಾನುವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ-ಸೌತ್ ಆಫ್ರಿಕಾ ನಡುವೆ ಟಿ-20 ಪಂದ್ಯ ನಡೆಯಲಿದ್ದು, ಪಂದ್ಯ ವೀಕ್ಷಣೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತೆರಳುತ್ತಿದ್ದಾರೆ. ಪಂದ್ಯ ಮುಗಿದ ನಂತರ ಕೆಎಸ್​ಸಿಎ ಆಡಳಿತ ಮಂಡಳಿ ಪಂದ್ಯಾವಳಿಯಿಂದ ಬರುವ ತನ್ನ ಪಾಲಿನ ಲಾಭಾಂಶದಲ್ಲಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಲಿದೆ ಎಂದು ಹೇಳಲಾಗ್ತಿದೆ.

ಇತ್ತೀಚೆಗಷ್ಟೇ ನೆರೆ ಪರಿಹಾರಕ್ಕೆ ನೆರವು ನೀಡುವಂತೆ ಕೆಎಸ್‌ಸಿಎ ಗೆ ಡಿಸಿಎಂ ಅಶ್ವಥ್ ನಾರಾಯಣ್ ಮನವಿ ಮಾಡಿದ್ದರು. ಕೆಎಸ್​ಸಿಎ ಗೆ ಭೇಟಿ ನೀಡಿ ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸಿ, ಪಂದ್ಯದಲ್ಲಿ ಬರುವ ಸ್ವಲ್ಪ ಹಣವನ್ನ ಸಿಎಂ ಪರಿಹಾರ ನಿಧಿಗೆ ನೀಡುವಂತೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿರುವ ಕೆಎಸ್‌ಸಿಎ, ಪಂದ್ಯಾವಳಿಯಿಂದ ಬರುವ ಆದಾಯದಲ್ಲಿ ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡುವ ಸಾಧ್ಯತೆಯಿದೆ.

ABOUT THE AUTHOR

...view details