ಬೆಂಗಳೂರು: ಬಿಎಸ್ವೈ ರಾಜೀನಾಮೆ ವಿಚಾರಕ್ಕೆ ಸಂಬಂಧ ಪಟ್ಟಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು, ಈ ಕುರಿತು ನನಗೂ ಗೊತ್ತಾಗ್ತಿಲ್ಲ ಏನಾಗ್ತಿದೆ ಅಂತ, ನನಗೂ ಗೊಂದಲವಿದೆ ಎಂದು ಹೇಳಿದರು.
ಇದು ಇಡೀ ರಾಜ್ಯದ ಭವಿಷ್ಯದ ವಿಚಾರ, ಹೈಕಮಾಂಡ್ ಮತ್ತು ಯಡಿಯೂರಪ್ಪ ಇಬ್ಬರೂ ಚರ್ಚೆ ಮಾಡ್ತಾರೆ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಯಡಿಯೂರಪ್ಪ ಅವರು ಈಗಾಗಲೇ ಹೇಳಿದ್ದಾರೆ. ಏನಾಗ್ತಿದೆ ಅಂತ ವರಿಷ್ಠರು ಮತ್ತು ಯಡಿಯೂರಪ್ಪಗೆ ಗೊತ್ತು. ಇವರಿಬ್ಬರೂ ಒಟ್ಟಿಗೆ ಕುಳಿತು ಚರ್ಚೆ ಮಾಡಿ, ನಿರ್ಧರಿಸುತ್ತಾರೆ ಎಂದರು.