ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 222ನೇ ಜನ್ಮ ದಿನಾಚರಣೆ ಅಂಗವಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ನಗರದ ರೈಲ್ವೆ ನಿಲ್ದಾಣ ಬಳಿಯ ಸಂಗೊಳ್ಳಿ ರಾಯಣ್ಣನ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಯಡಿಯೂರಪ್ಪ, ಬ್ರಿಟಿಷರ ವಿರುದ್ಧ ಕಾದಾಡಿದ ವೀರ ರಾಯಣ್ಣ ಯುವಜನತೆಗೆ ದೊಡ್ಡ ಮಾದರಿಯಾಗಿದ್ದಾರೆ. ಗಲ್ಲಿಗೆ ಏರಿಸುವ ವೇಳೆಯೂ ರಾಯಣ್ಣ ದೇಶಭಿಮಾನ ಮೆರೆದರು. ಅವರ ನೆನಪು ಎಂದಿಗೂ ಅಜರಾಮರ ಎಂದು ಸ್ಮರಿಸಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಸಿಎಂ ಮಾಲಾರ್ಪಣೆ
ಇಂದು ಸಂಗೊಳ್ಳಿ ರಾಯಣ್ಣ ಜನ್ಮ ದಿನಾಚರಣೆ ಹಿನ್ನೆಲೆ ನಗರದ ರೈಲ್ವೆ ನಿಲ್ದಾಣ ಬಳಿಯ ಸಂಗೊಳ್ಳಿ ರಾಯಣ್ಣನ ಪುತ್ಥಳಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ, ದಿನೇಶ್ ಗುಂಡೂರಾವ್, ಹೆಚ್.ಎಂ.ರೇವಣ್ಣ ಮಾಲಾರ್ಪಣೆ ಮಾಡಿದರು.
Kranthiveera Sangolli Rayanna birthday
ಬಿಎಸ್ವೈ ಅವರ ಭಾಷಣದ ಸಂದರ್ಭದಲ್ಲಿ ಅಲ್ಲಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗಮಿಸಿದರು. ಇಬ್ಬರು ನಾಯಕರು ಪರಸ್ಪರ ಹಸ್ತಲಾಘವ ಮಾಡಿಕೊಂಡರು. ಮಾಜಿ ಸಚಿವ ಹೆಚ್.ಎಂ.ರೇವಣ್ಣ ಕೂಡ ಇದ್ದರು. ಯಡಿಯೂರಪ್ಪ ತೆರಳಿದ ನಂತರ ಗುಂಡೂರಾವ್, ಹೆಚ್.ಎಂ.ರೇವಣ್ಣ ರಾಯಣ್ಣ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು.