ಕರ್ನಾಟಕ

karnataka

ETV Bharat / city

ಕೆಪಿಎಸ್​ಸಿಯ ಎಸ್​​ಡಿಎ ಪರೀಕ್ಷೆಗೆ ದಿನಾಂಕ‌ ಮತ್ತು ವೇಳಾಪಟ್ಟಿ ಪ್ರಕಟ - ಕೆಪಿಎಸ್ಸಿಯ ಎಸ್​​ಡಿಎ ಪರೀಕ್ಷೆ ವೇಳಾಪಟ್ಟಿ

ಕರ್ನಾಟಕ ಲೋಕಸೇವಾ ಆಯೋಗವು ಕಳೆದ ಮಾರ್ಚ್ ತಿಂಗಳಲ್ಲಿ ಮುಂಡೂಡಿದ್ದ ಎಸ್​ಡಿಎ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ದಿನಾಂಕ ಮತ್ತು ವೇಳಾಪಟ್ಟಿಯನ್ನು ಪ್ರಕಟಿಸಿದೆ.

kpsc-sda-exam-date-announced
ಕೆಪಿಎಸ್​ಸಿಯ ಎಸ್​​ಡಿಎ ಪರೀಕ್ಷೆಗೆ ದಿನಾಂಕ‌ ಮತ್ತು ವೇಳಾಪಟ್ಟಿ ಪ್ರಕಟ

By

Published : Jul 1, 2021, 1:49 AM IST

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2019ನೇ ಸಾಲಿನ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿಗೆ ಪರೀಕ್ಷಾ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ.

ಸೆಪ್ಟೆಂಬರ್ 18ರಂದು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಹಾಗೂ ಸೆಪ್ಟೆಂಬರ್ 19ರಂದು ಸಾಮಾನ್ಯ ಜ್ಞಾನ ಮತ್ತು ಸಾಮಾನ್ಯ ಕನ್ನಡ ಅಥವಾ ಸಾಮಾನ್ಯ ಇಂಗ್ಲಿಷ್​​ ಪರೀಕ್ಷೆ ನಡೆಸಲು ದಿನಾಂಕಗಳನ್ನು ಪ್ರಕಟಿಸಲಾಗಿದೆ. ಈ ಮಾಹಿತಿಯು ಆಯೋಗದ ವೆಬ್ ಸೈಟ್​​ನಲ್ಲಿ ಲಭ್ಯವಿದೆ.

ಕೆಪಿಎಸ್ಸಿಯಿಂದ ಪರೀಕ್ಷೆಯ ದಿನಾಂಕ ಪ್ರಕಟ

ಸೆಪ್ಟೆಂಬರ್ 18ರಂದು ಶನಿವಾರ, ಬೆಳಗ್ಗೆ 10ರಿಂದ 11.30ರವರೆಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ವಿವರಣಾತ್ಮಕ ಮಾದರಿಯಲ್ಲಿ‌ ನಡೆಯಲಿದೆ. ಕನ್ನಡವನ್ನು ಶಾಲೆಗಳಲ್ಲಿ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಓದಿರದ ಅಭ್ಯರ್ಥಿಗಳಿಗೆ ಈ ಪರೀಕ್ಷೆ ನಡೆಸಲಾಗುತ್ತದೆ.

ಕೆಪಿಎಸ್ಸಿಯಿಂದ ಪರೀಕ್ಷೆಯ ವೇಳಾಪಟ್ಟಿ

ಇದನ್ನೂ ಓದಿ:ರಾಜ್ಯರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದ ರಮೇಶ್ ಜಾರಕಿಹೊಳಿ‌..!

ಸೆಪ್ಟೆಂಬರ್ 19ರಂದು ಬೆಳಗ್ಗೆ 10ರಿಂದ 11.30ರವರೆಗೆ ಸಾಮಾನ್ಯ ಜ್ಞಾನ ಹಾಗೂ ಮಧ್ಯಾಹ್ನ 2 ರಿಂದ 3.30ರವರೆಗೆ ಸಾಮಾನ್ಯ ಕನ್ನಡ ಅಥವಾ ಸಾಮಾನ್ಯ ಇಂಗ್ಲೀಷ್ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಗಳನ್ನು ಕಳೆದ ಮಾರ್ಚ್ ತಿಂಗಳಲ್ಲಿ ಕೊರೊನಾ ಕಾರಣಕ್ಕೆ ಮುಂದೂಡಲಾಗಿತ್ತು.

ABOUT THE AUTHOR

...view details