ಕರ್ನಾಟಕ

karnataka

ETV Bharat / city

ಕೆಪಿಎಲ್​​​​ ಮ್ಯಾಚ್​​​ ಫಿಕ್ಸಿಂಗ್​​​ ಪ್ರಕರಣ: ವಿಚಾರಣೆಗೆ ಹಾಜರಾಗಲು ಸಮಯ ಕೋರಿದ ಅಭಿಮನ್ಯು - ಸಯ್ಯದ್ ಮುಷ್ತಾಕ್ ಅಲಿ T20 ಟೂರ್ನಿಯ ಸೆಮಿಫೈನಲ್​ ಪಂದ್ಯ

ಕರ್ನಾಟಕದ ವೇಗಿ ಅಭಿಮನ್ಯು ಮಿಥುನ್​​ಗೆ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಇಂದು‌ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು.

ಕರ್ನಾಟಕದ ವೇಗಿ ಅಭಿಮನ್ಯು ಮಿಥುನ್​​
ಕೆಪಿಎಲ್​ ಮ್ಯಾಚ್​​ ಫಿಕ್ಸಿಂಗ್​ ಪ್ರಕರಣ

By

Published : Nov 28, 2019, 5:48 PM IST

Updated : Nov 28, 2019, 6:32 PM IST

ಬೆಂಗಳೂರು:ಕೆಪಿಎಲ್​ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆಗೆ ಹಾಜರಾಗಬೇಕಿದ್ದ ಅಭಿಮನ್ಯು ಮಿಥುನ್​, ಸಯ್ಯದ್ ಮುಷ್ತಾಕ್ ಅಲಿ ಟಿ-20 ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಕಾರಣ ವಿಚಾರಣೆಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಸಿಸಿಬಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಕರ್ನಾಟಕದ ವೇಗಿ ಅಭಿಮನ್ಯು ಮಿಥುನ್​​ಗೆ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಇಂದು‌ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು.

ಸೂರತ್​​ನಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟಿ-20 ಟೂರ್ನಿಯ ಸೆಮಿಫೈನಲ್​ ಪಂದ್ಯ ನಡೆಯುತ್ತಿದೆ. ತಂಡದಲ್ಲಿ ನಾನು ಇದ್ದೇನೆ. ಈ ಹಿನ್ನೆಲೆಯಲ್ಲಿ ಸಿಸಿಬಿಯ ವಿಚಾರಣೆಗೆ ಬರಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಸಮಯಾವಕಾಶ ನೀಡಬೇಕು ಎಂದು ಸಂದೀಪ್ ಪಾಟೀಲ್ ಅವರಿಗೆ ಮನವಿ ಮಾಡಿದ್ದಾರೆ.

ಈ ಪಂದ್ಯ ಹೊರ ರಾಜ್ಯದಲ್ಲಿ ನಡೆಯುತ್ತಿರುವ ಕಾರಣ ಎರಡು ಮೂರು ದಿನಗಳಲ್ಲಿ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ. ಕೆಪಿಎಲ್ ಫಿಕ್ಸಿಂಗ್‌ ಸಂಬಂಧ ತನಿಖೆ ನಡೆಸುತ್ತಿರುವ ಸಿಸಿಬಿ, ಕೆಪಿಎಲ್​​ನಲ್ಲಿ ಆಡಿದ ಎಲ್ಲಾ ಆಟಗಾರರಿಗೆ ನೋಟಿಸ್ ನೀಡಿತ್ತು.‌ ಅದರಂತೆ ಮಿಥುನ್​​ನನ್ನು ವಿಚಾರಣೆಗೆ ಕರೆದಿದ್ದರು.

Last Updated : Nov 28, 2019, 6:32 PM IST

ABOUT THE AUTHOR

...view details