ಕರ್ನಾಟಕ

karnataka

ETV Bharat / city

ಕೆಪಿಎಲ್​​​ ಮ್ಯಾಚ್​ ಫಿಕ್ಸಿಂಗ್​​-ಬೆಟ್ಟಿಂಗ್​ ಪ್ರಕರಣ: ನಾಲ್ವರು ಬುಕ್ಕಿಗಳಿಗೆ LOC ಜಾರಿ - bangalore news

ಕರ್ನಾಟಕ ಪ್ರೀಮಿಯರ್​ ಲೀಗ್ (ಕೆಪಿಎಲ್​) ಮ್ಯಾಚ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್  ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಸಿಬಿ ಹೆಚ್ವುವರಿ ಆಯುಕ್ತ ಸಂದೀಪ್ ಪಾಟೀಲ್ ಅವರ ತಂಡಕ್ಕೆ, ಮ್ಯಾಚ್​ ಫಿಕ್ಸಿಂಗ್​ನಲ್ಲಿ ನಾಲ್ವರು ಬುಕ್ಕಿಗಳು ಪ್ರಮುಖ ಪಾತ್ರ ವಹಿಸಿರುವ ಮಾಹಿತಿ ತನಿಖೆಯಿಂದ ತಿಳಿದುಬಂದಿದೆ.

ಕೆಪಿಎಲ್​ ಮ್ಯಾಚ್​ಫಿಕ್ಸಿಂಗ್​ ಮತ್ತು ಬೆಟ್ಟಿಂಗ್​ ಪ್ರಕರಣ: ನಾಲ್ವರು ಬುಕ್ಕಿಗಳಿಗೆ LOC ಜಾರಿ

By

Published : Nov 4, 2019, 10:20 AM IST

ಬೆಂಗಳೂರು:ಕರ್ನಾಟಕ ಪ್ರೀಮಿಯರ್​ ಲೀಗ್ (ಕೆಪಿಎಲ್​) ಮ್ಯಾಚ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಸಿಬಿ ಹೆಚ್ವುವರಿ ಆಯುಕ್ತ ಸಂದೀಪ್ ಪಾಟೀಲ್ ಅವರ ತಂಡಕ್ಕೆ, ಮ್ಯಾಚ್​ ಫಿಕ್ಸಿಂಗ್​ನಲ್ಲಿ ನಾಲ್ವರು ಬುಕ್ಕಿಗಳು ಪ್ರಮುಖ ಪಾತ್ರ ವಹಿಸಿರುವ ಮಾಹಿತಿ ತನಿಖೆಯಿಂದ ತಿಳಿದುಬಂದಿದೆ.

ಸಿಸಿಬಿ ಪೊಲೀಸರು ನಾಲ್ವರು ಬುಕ್ಕಿಗಳಿಗೆ ಲುಕ್ ಔಟ್ ಸರ್ಕ್ಯುಲರ್ ಹೊರಡಿಸಿದ್ದಾರೆ. ಬೆಳಗಾವಿ ಪ್ಯಾಂಥರ್ಸ್ ಮಾಲೀಕ ಅಸ್ಫಾಕ್​ ಅಲಿ ಹಾಗೂ ಬೌಲರ್​ಗಳ ಬಂಧನವಾಗ್ತಿದ್ದಂತೆ‌ ಬುಕ್ಕಿಗಳು ದೇಶ ಬಿಟ್ಟು ವಿದೇಶಗಳಿಗೆ ಹಾರಿದ್ದಾರೆ. ಓರ್ವ ಬುಕ್ಕಿ ದುಬೈಗೆ, ಮತ್ತೋರ್ವ ವೆಸ್ಟ್ ಇಂಡೀಸ್​ಗೆ, ಇನ್ನಿಬ್ಬರು ಬುಕ್ಕಿಗಳು ಸಹ ವಿದೇಶಕ್ಕೆ ಪರಾರಿಯಾಗಿರುವ ಮಾಹಿತಿ ಸಿಸಿಬಿಗೆ ಲಭ್ಯವಾಗಿದೆ. ಹೀಗಾಗಿ ಪರಾರಿಯಾದ ಬುಕ್ಕಿಗಳ ಪತ್ತೆಗೆ ದೇಶದ ಎಲ್ಲಾ ಏರ್​ಪೋರ್ಟ್​ಗಳಲ್ಲಿ ಎಲ್ಒಸಿ ಜಾರಿ ಮಾಡಿ, ನಾಲ್ವರು ಬುಕ್ಕಿಗಳು ಕಂಡುಬಂದಲ್ಲಿ ಮಾಹಿತಿ ನೀಡುವಂತೆ ತಿಳಿಸಲಾಗಿದೆ.

ಈ ನಾಲ್ವರು ಬುಕ್ಕಿಗಳು ಮ್ಯಾಚ್​ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್​ನಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಇವರು ದೇಶ-ವಿದೇಶಗಳ ಅಂತಾರಾಷ್ಟ್ರೀಯ ಆಟಗಾರರನ್ನ ಬಳಸಿಕೊಂಡು ಫಿಕ್ಸಿಂಗ್ ಮಾಡಿರುವ ವಿಚಾರ ತನಿಖೆಯಲ್ಲಿ ಬಯಾಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಬೆಳಗಾವಿ ಪ್ಯಾಂಥರ್ಸ್ ಮಾಲೀಕ ಅಸ್ಫಾಕ್​ ಅಲಿ ಜೊತೆ ಹಲವಾರು ಪ್ರಮುಖ ಆಟಗಾರರು ಭಾಗಿಯಾಗಿರುವ ಮಾಹಿತಿ ಮೇರೆಗೆ ಈಗಾಗಲೇ ಸಿಸಿಬಿ, ಹಲವಾರು ಪ್ರತಿಷ್ಠಿತ ಆಟಗಾರರಿಗೆ ನೋಟಿಸ್ ಜಾರಿ ಮಾಡಿ ಕೆಲವರ ವಿಚಾರಣೆ ಕೂಡ ನಡೆಸಿದೆ. ಇದರಲ್ಲಿ ಪ್ರಮುಖ ಪಾತ್ರ ವಹಿಸಿರುವವರ ಬಗ್ಗೆ ಸಾಕ್ಷಿ ಲಭ್ಯವಾದರೆ ಸಿಸಿಬಿ ಅವರನ್ನ ಬಂಧಿಸೋದಕ್ಕೆ ಕೂಡ ಮುಂದಾಗಿದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details