ಬೆಂಗಳೂರು:ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಗಲಭೆ ಆರೋಪಿಯಾಗಿರುವ ಫೈರೋಜ್ ಪಾಷಗೂ ಕಾಂಗ್ರೆಸ್ಗೂ ಯಾವುದೇ ಸಂಬಂಧವಿಲ್ಲ ಎಂದು ಕೆಪಿಸಿಸಿ ಸ್ಪಷ್ಟಪಡಿಸಿದೆ.
ಗಲಭೆ ಆರೋಪಿ ಫೈರೋಜ್ ಪಾಷಗೂ ಕಾಂಗ್ರೆಸ್ಗೂ ಸಂಬಂಧವಿಲ್ಲ: ಕೆಪಿಸಿಸಿ ಸ್ಪಷ್ಟನೆ - ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್
ಗಲಭೆ ಆರೋಪಿ ಫೈರೋಜ್ ಪಾಷ ಕಾಂಗ್ರೆಸ್ ಕಾರ್ಯಕರ್ತ ಎಂಬಂತೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಈ ವ್ಯಕ್ತಿಗೂ ಕಾಂಗ್ರೆಸ್ಗೂ ಯಾವುದೇ ಸಂಬಂಧವಿಲ್ಲ ಎಂದು ಕೆಪಿಸಿಸಿ ಸ್ಪಷ್ಟಪಡಿಸಿದೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಗಲಭೆ ಆರೋಪಿ ಫೈರೋಜ್ ಪಾಷ ಕಾಂಗ್ರೆಸ್ ಕಾರ್ಯಕರ್ತ ಎಂಬಂತೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಈ ವ್ಯಕ್ತಿ ಬಹಳ ಸಮಯದ ಹಿಂದೆ ಎಸ್ಡಿಪಿಐ ಸೇರಿ ಅಲ್ಲಿ ಸಕ್ರಿಯನಾಗಿದ್ದಾನೆ. ಈ ವ್ಯಕ್ತಿಗೂ ಕಾಂಗ್ರೆಸ್ಗೂ ಯಾವುದೇ ಸಂಬಂಧವಿಲ್ಲ. ಬಹಳ ಹಳೆಯ ಫೋಟೊಗಳಲ್ಲಿ ನಮ್ಮ ಪಕ್ಷದ ರಾಷ್ಟ್ರ ನಾಯಕರ ಜೊತೆ ಇರುವ ಫೋಟೋಗಳು ಬಿತ್ತರವಾಗುತ್ತಿವೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಗಲಭೆಗೆ ಕಾರಣರಾದವರ ವಿರುದ್ಧ ಸೂಕ್ತ ತನಿಖೆ ನಡೆಸಿ, ಕಾನೂನು ರೀತಿ ಕ್ರಮ ಕೈಗೊಳ್ಳಲಿ. ಈ ಘಟನೆ ಸಂಬಂಧ ಅಮಾಯಕ ಜನರಿಗೆ ಯಾವುದೇ ಕಿರುಕುಳ ಕೊಡಬಾರದು. ಕಾಂಗ್ರೆಸ್ ಪಕ್ಷವೂ ಈ ನೆಲದ ಕಾನೂನು, ಸಂವಿಧಾನಕ್ಕೆ ಗೌರವ ನೀಡುವವರನ್ನು ಬೆಂಬಲಿಸಲಿದೆ ಎಂದು ತಿಳಿಸಿದ್ದಾರೆ.