ಬೆಂಗಳೂರು :ಯಾರೋ ಸಾಮಾನ್ಯರ ಆಡಿಯೋ ಅಲ್ಲ. ಈ ಆಡಿಯೋ ನಳಿನ್ ಕುಮಾರ್ ಕಟೀಲ್ ಅವರದ್ದೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ರಾಜಾಜಿನಗರದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಲ್ಲಾ ರಾಜ್ಯಗಳ ಕಾಂಗ್ರೆಸ್ ಅಧ್ಯಕ್ಷರ ಜೊತೆ ರಾಹುಲ್ ಗಾಂಧಿ ಚರ್ಚೆ ಮಾಡಲಿದ್ದಾರೆ. ನಮ್ಮನ್ನ ಕೂಡ ಕರೆದಿದ್ದಾರೆ. ಮಾರ್ಗದರ್ಶನ ಪಡೆಯಲು ಹೋಗುತ್ತಿದ್ದೇನೆ.
ಪದಾಧಿಕಾರಿಗಳ ನೇಮಕ ಕುರಿತು ಚರ್ಚೆ ಆಗುತ್ತೆ. ಮುಂದಿನ ವಾರ ರಾಜ್ಯ ಉಸ್ತುವಾರಿ ಐದು ದಿನಗಳ ರಾಜ್ಯ ಪ್ರವಾಸ ಮಾಡ್ತಾರೆ. ಅವರು ಬಂದು ಹೋದ ಬಳಿಕ ಪಟ್ಟಿ ಅಂತಿಮವಾಗುತ್ತೆ. ನಾನು ಈಗಾಗಲೇ ಪಟ್ಟಿ ನೀಡಿದ್ದೇನೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಡಿಯೋ ವಿಚಾರವಾಗಿ ಮಾತನಾಡಿದ ಅವರು, ಯಾರೋ ಸಾಮಾನ್ಯರ ಆಡಿಯೋ ಅಲ್ಲ. ಈ ಆಡಿಯೋ ನಳಿನ್ ಕುಮಾರ್ ಕಟೀಲ್ ಅವರದ್ದೇ.. ಅವರ ಪಕ್ಷದ ಬೆಳವಣಿಗೆಯ ಬಗ್ಗೆ ಮಾತನಾಡಿದ್ದಾರೆ.
ಇದು ತನಿಖೆಗೆ ಕೊಡಬೇಕು ಅಂತಾರೆ. ತನಿಖೆಗೆ ಅಧಿಕಾರಿಯನ್ನು ನೇಮಕ ಮಾಡ್ತಾರೆ. ಆ ಅಧಿಕಾರಿ ಇದನ್ನ ಫೇಕ್ ಅಂತಾರೆ. ಈ ಹಿಂದೆ ಯಡಿಯೂರಪ್ಪ ಅವರ ಆಡಿಯೋ ವಿಚಾರ ಏನಾಯ್ತು? ನಾವಂತೂ ಈ ಪ್ರಕರಣದಲ್ಲಿ ಇಲ್ಲ ಎಂದರು.
ಓದಿ: ಅದು ರಾಜ್ಯಾಧ್ಯಕ್ಷ ಕಟೀಲ್ ಆಡಿಯೋ ಅಲ್ಲ, ಕಾಂಗ್ರೆಸ್ ಕುತಂತ್ರ: ರೇಣುಕಾಚಾರ್ಯ
ಮಿಮಿಕ್ರಿ ಮಾಡಿದ್ದಾರೆ ಎಂದು ಸುಧಾಕರ್ ಹೇಳಿಕೆ ವಿಚಾರ ಮಾತನಾಡಿ, ಅವರದ್ದು ಮಾಡಿಸೋಣ ಮಿಮಿಕ್ರಿ. ನಾವೇನು ಮಿಮಿಕ್ರಿ ಮಾಡುವವರನ್ನು ಇಟ್ಟುಕೊಂಡಿದ್ದೀವಾ? ಬಿಜೆಪಿ ಕಿತ್ತೊಗೆಯಬೇಕು ಅಂತಾ ಜನ ನಿರ್ಧಾರ ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ.
ಎರಡು ದಿನ ಲಂಬಾಣಿ ತಾಂಡಕ್ಕೆ ಹೋಗಿದ್ದೆ. ಆನ್ಲೈನ್ ಅಂತಾರೆ ಎಲ್ಲಿದೆ? ಒಂದೇ ಒಂದು ಸರ್ಕಾರದ ಯೋಜನೆ ತೋರಿಸಲಿ. ಜನರ ಕಷ್ಟ ಈ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಓದಿ: ರಾಜ್ಯ ರಾಜಕಾರಣದಲ್ಲಿ ಸಂಚಲನ: ಸ್ಫೋಟಕ ಆಡಿಯೋ ಬಗ್ಗೆ ನಳಿನ್ ಕುಮಾರ್ ಕಟೀಲ್ ಹೀಗಂದರು..