ಬೆಂಗಳೂರು: ನಿನ್ನೆ ಹೃದಯಾಘಾತದಿಂದ ನಿಧನರಾದ ನಟ ಚಿರಂಜೀವಿ ಸರ್ಜಾ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸರ್ಜಾ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.
ಚಿರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಡಿಕೆಶಿ - dk shivakumar
ಭಾನುವಾರ ಅಗಲಿದ ಸ್ಯಾಂಡಲ್ವುಡ್ ನಟ ಚಿರಂಜೀವಿ ಸರ್ಜಾ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಸರ್ಜಾ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಚಿರು ನಿವಾಸಕ್ಕೆ ತೆರಳಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಆರೋಗ್ಯವಂತ ಯುವಕ, ತನ್ನ ಪ್ರತಿಭೆಯಲ್ಲಿ ಕಣ್ಣು ಬಿಡುವ ವೇಳೆ ಹೀಗಾಗಿದೆ. ಚಿರಂಜೀವಿ ಸರ್ಜಾ ಕುಟುಂಬದವರನ್ನು ಹಲವು ವರ್ಷಗಳಿಂದ ಬಲ್ಲವನಾಗಿದ್ದೆ. ಎಲ್ಲರೂ ಚಿರಪರಿಚಿತರು. ಸರ್ಜಾ ಕುಟುಂಬ ಚಿತ್ರರಂಗಕ್ಕೆ ತನ್ನದೆ ಅದ ಕೊಡುಗೆ ನೀಡಿದೆ. ಚಿರು ಅಗಲಿಕೆ ತುಂಬಾ ದುಃಖದ ವಿಷಯ. ಚಿರು ಅವರ ಕುಟುಂಬಕ್ಕೆ ಹಾಗೂ ಸಿನಿಮಾ ಲೋಕಕ್ಕೆ ಇವರ ಸಾವು ತುಂಬಲಾರದ ನಷ್ಟವಾಗಿದೆ ಎಂದು ಸಂತಾಪ ವ್ಯಕ್ತಪಡಿಸಿದರು.
ಜೊತೆಗೆ ಈ ಕುಟುಂಬದಲ್ಲಿ ಇಂತಹ ನಟ ಮತ್ತೊಬ್ಬ ಹುಟ್ಟಲಿ. ಚಿರು ಸಾವಿನ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ನೀಡಲಿ, ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದು ಚಿರಂಜೀವಿ ಸರ್ಜಾಗೆ ಡಿಕೆಶಿ ಅಂತಿಮ ನಮನ ಸಲ್ಲಿಸಿದರು.