ಬೆಂಗಳೂರು: ಶಾಸಕರ ರಾಜೀನಾಮೆಯಿಂದ ಕಂಗೆಟ್ಟಿರುವ ಕಾಂಗ್ರೆಸ್ ಪಾಳೆಯ, ಪ್ರಧಾನಿ ಮೋದಿ ಅವರನ್ನು ಮೊಹಮ್ಮದ್ ಬಿನ್ ತುಘಲಕ್ಗೆ ಹೋಲಿಕೆ ಮಾಡಿ, ಟೀಕಿಸಿದೆ.
ಅತೃಪ್ತ ಶಾಸಕರ ಮನವೊಲಿಕೆ ಯತ್ನದ ನಡುವೆಯೂ ರಾಜ್ಯ ಕಾಂಗ್ರೆಸ್, ಪ್ರಧಾನಿ ಮೋದಿ ವಿರುದ್ಧ ಟ್ವಿಟ್ಟರ್ನಲ್ಲಿ ಹರಿಹಾಯ್ದಿದೆ.

ಮೊಹಮ್ಮದ್ ಬಿನ್ ತುಘಲಕ್ ನಂತರ ಈ ಭಾರತವನ್ನು ಆಳುತ್ತಿರುವ ಅದೇ ಗುಣಗಳುಳ್ಳ ವ್ಯಕ್ತಿ, ನರೇಂದ್ರ ಮೋದಿ! ನೈತಿಕತೆ ಮತ್ತು ಮೌಲ್ಯಹೀನ ರಾಜಕಾರಣಿ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ತಿಲಾಂಜಲಿ ಇಟ್ಟು 10 ರಾಜ್ಯಗಳಲ್ಲಿ ಆಪರೇಷನ್ ಕಮಲ ಮಾಡಿದ್ದಾರೆ. ಕರ್ನಾಟಕವು ಮೋದಿಯ ಸಂಚಿಗೆ ಬಲಿಯಾಗಬಾರದು ಎಂದು ಕೆಪಿಸಿಸಿ ಟ್ವೀಟ್ ಮೂಲಕ ಹೇಳಿದೆ.
ರಾಜ್ಯದಲ್ಲಿ ದಿಢೀರ್ ಉದ್ಭವಿಸಿದ ವಿದ್ಯಮಾನದಿಂದ ನಿನ್ನೆ ಸಹ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ, ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು.