ಬೆಂಗಳೂರು: ಕೊರೊನಾ ಅಟ್ಟಹಾಸಕ್ಕೆ ಇಡೀ ದೇಶವನ್ನೇ ಲಾಕ್ಡೌನ್ ಮಾಡಲಾಗಿದೆ. ಇದರ ಪರಿಣಾಮದಿಂದಾಗಿ ವಲಸೆ ಕಾರ್ಮಿಕರು, ದಿನಗೂಲಿ ನೌಕರರು, ಸ್ವಗ್ರಾಮಗಳಿಗೆ ತೆರಳಲು ಸಾಧ್ಯವಾಗದೆ ಶಿಬಿರಗಳಲ್ಲಿ ಉಳಿದುಕೊಂಡಿದ್ದಾರೆ.
ವಲಸೆ ಕಾರ್ಮಿಕರಿಗೆ ಕೋವಿಡ್-19 ಆರೋಗ್ಯ ತಪಾಸಣೆ - corona virus phobia
ಹಲವು ಕಾರ್ಮಿಕ ಕುಟುಂಬಗಳು ವಾಹನ ಸೌಲಭ್ಯದ ಕೊರತೆಯಿಂದ ಮಾರ್ಗ ಮಧ್ಯದಲ್ಲೇ ತಂಗಬೇಕಾದ ಅನಿರ್ವಾಯತೆ ಇದೆ.
ಕೊರೊನಾ ವೈರಸ್
ಕಾರ್ಮಿಕರ ಕುಟುಂಬಗಳಿಗೆ ವಾಹನ ಸೌಲಭ್ಯದ ಕೊರತೆಯಿಂದ ಮಾರ್ಗ ಮಧ್ಯದಲ್ಲೇ ತಂಗಬೇಕಾದ ಅನಿರ್ವಾಯತೆ ಇದೆ. ಹೀಗಾಗಿ ಇಂತಹ ಶಿಬಿರಗಳಲ್ಲಿ ಸೋಂಕಿತರ ವ್ಯಕ್ತಿಗಳಿದ್ದರೆ ನರುಳುವುದಲ್ಲದೇ ಇತರರಿಗೆ ಹರಡುವ ಸಾಧ್ಯತೆ ಹೆಚ್ಚಾಗಿದೆ.
ಈ ಹಿನ್ನೆಲೆಯಲ್ಲಿ ಶಿಬಿರದಲ್ಲಿರುವರ ಆರೋಗ್ಯ ತಪಾಸಣೆಯನ್ನ ಪ್ರತಿದಿನ ಕೈಗೊಂಡು ಸೋಂಕಿತರ/ಶಂಕಿತರರಿಗೆ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ.