ಬೆಂಗಳೂರು:ರಾಜ್ಯದ ಹಾಲಿನ ಒಕ್ಕೂಟಗಳು ದುಬಾರಿ ವೆಚ್ಚ ಹಾಗೂ ಭ್ರಷ್ಟಾಚಾರದಿಂದಾಗಿ ಭಾರೀ ನಷ್ಟದಲ್ಲಿವೆ. ಇದನ್ನು ಸರಿದೂಗಿಸಲು ರೈತರಿಗೆ ನೀಡುವ ಹಾಲಿನ ದರದಲ್ಲಿ ಇಳಿಕೆ ಮಾಡಲಾಗುತ್ತಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದರು.
ನಗರದ ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹಾಲಿನ ದರ ಏರಿಕೆ ಮಾಡಿ ಎನ್ನುತ್ತಿದ್ದಾರೆ. ಇದು ನಷ್ಟದಲ್ಲಿರುವ ಒಕ್ಕೂಟಗಳ ಆದಾಯ ಸರಿದೂಗಿಸಲು ಮಾಡಿದ ಪ್ಲಾನ್ ಎಂದರು.
ರಾಗಿ ಖರೀದಿ ಕೇಂದ್ರಗಳನ್ನು ಸರ್ಕಾರ ಆರಂಭ ಮಾಡಿದೆ. ರಾಗಿಯ ದರ ಮಾರುಕಟ್ಟೆಯಲ್ಲಿ ಕ್ವಿಂಟಾಲ್ಗೆ 1500 ರೂ. ಇದೆ. ಸರ್ಕಾರದ ಎಂಎಸ್ಪಿ 3,373 ರೂ. ಘೋಷಣೆ ಮಾಡಿದೆ. ಆದರೆ, ಖರೀದಿ ಕೇಂದ್ರಗಳಲ್ಲಿ ರಾಗಿ ಖರೀದಿ ಆಗುತ್ತಿಲ್ಲ. ಖರೀದಿ ಕೇಂದ್ರಗಳಲ್ಲಿಯೇ ರಾಗಿ ಖರೀದಿ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸರ್ಕಾರ ಕರ್ಫ್ಯೂ, ಲಾಕ್ಡೌನ್ ನಿರ್ಬಂಧ ಕೈಬಿಡಬೇಕು. ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ ದುರ್ಬಲ ಎಂದು ಹೇಳಿದೆ. ಆದರೆ, ಸರ್ಕಾರ ಜನರಿಗೆ ಆತಂಕ ಸೃಷ್ಟಿ ಮಾಡಿದೆ ಎಂದು ದೂರಿದರು.
ಇದನ್ನೂ ಓದಿ:ರಾಜ್ಯದಲ್ಲಿಂದು 47,754 ಹೊಸ ಕೋವಿಡ್ ಕೇಸ್.. ದಿಢೀರ್ ಹೆಚ್ಚಾಯ್ತು ಮರಣ ಪ್ರಮಾಣ!