ಬೆಂಗಳೂರು:ವೈಯಕ್ತಿಕ ಕಾರಣಕ್ಕೆ ಶುರುವಾದ ಗಲಾಟೆಯಲ್ಲಿ ಯುವಕನ ಎದೆಗೆ ಚಾಕು ಇರಿದ ಘಟನೆ ಕಾಟನ್ ಪೇಟೆಯ ಗೂಡ್ ಶೆಡ್ ರಸ್ತೆಯಲ್ಲಿ ನಿನ್ನೆ(ಭಾನುವಾರ) ನಡೆದಿದೆ. ಸುನೀಲ್ ಮತ್ತು ಸೂರ್ಯ ಎಂಬ ಇಬ್ಬರು ಆರೋಪಿಗಳು ಸಂದೀಪ್ ಎಂಬ ಯುವಕನ ಎದೆಗೆ ಚಾಕು ಇರಿದಿದ್ದಾರೆ ಎಂದು ತಿಳಿದುಬಂದಿದೆ.
ವೈಯಕ್ತಿಕ ಕಾರಣಕ್ಕೆ ಯುವಕನ ಎದೆಗೆ ಚಾಕು ಇರಿತ: ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ - ವೈಯಕ್ತಿಕ ಕಾರಣಕ್ಕೆ ಯುವಕನ ಎದೆಗೆ ಚಾಕು ಇರಿತ
ವೈಯಕ್ತಿಕ ಕಾರಣ ನಡೆದ ಗಲಾಟೆಯಲ್ಲಿ ಯುವಕನ ಎದೆಗೆ ಚಾಕು ಇರಿಯಲಾಗಿದೆ. ಸದ್ಯ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
![ವೈಯಕ್ತಿಕ ಕಾರಣಕ್ಕೆ ಯುವಕನ ಎದೆಗೆ ಚಾಕು ಇರಿತ: ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ Two accused were taken into police custody](https://etvbharatimages.akamaized.net/etvbharat/prod-images/768-512-14985052-thumbnail-3x2-news.jpg)
ಸುನೀಲ್ ಮತ್ತು ಸೂರ್ಯ ಆರೋಪಿಗಳು
ಸಂದೀಪ್ ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಯುವತಿಯೊಬ್ಬಳ ವಿಚಾರಕ್ಕೆ ಗಲಾಟೆ ಆರಂಭವಾಗಿದೆ ಎನ್ನಲಾಗ್ತಿದೆ. ಸದ್ಯ ಇಬ್ಬರು ಆರೋಪಿಗಳನ್ನ ಕಾಟನ್ ಪೇಟೆ ಠಾಣಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಉತ್ತರ ಪ್ರದೇಶದಲ್ಲಿ ಸತಿಯ ಚಿತೆಗೆ ಹಾರಿದ ಪತಿ!