ಕರ್ನಾಟಕ

karnataka

ETV Bharat / city

ಬೆಂಗಳೂರಲ್ಲಿ ಜಗಳ ಬಿಡಿಸಲು ಬಂದವ ಹೆಣವಾದ... ಆರೋಪಿಗಳು ಅಂದರ್ - ರಂಜಾನ್

ಹಣ ಹಂಚಿಕೆ ವಿಚಾರದಲ್ಲಿ ನಡೆಯುತ್ತಿದ್ದ ಜಗಳ ಬಿಡಿಸಲು ಹೋಗಿದ್ದ ಅಮಾಯಕ ಜೀವವೊಂದು ಬಲಿಯಾಗಿದೆ. ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಆರೋಪಿಗಳು

By

Published : Jun 8, 2019, 12:14 PM IST

ಬೆಂಗಳೂರು: ಹಣ ಹಂಚಿಕೆ ವಿಚಾರದಲ್ಲಿ ನಡೆಯುತ್ತಿದ್ದ ಗಲಾಟೆ ಬಿಡಿಸಲು ಹೋಗಿದ್ದ ಸಿಗ್ಮಾತ್​ ಎಂಬಾತನಿಗೆ ಚಾಕು ಇರಿದು ಕೊಲೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಜೆ.ಜೆ.ನಗರ ಪೊಲೀಸರು ಬಂಧಿಸಿದ್ದಾರೆ.

ಬುಡೇನ್, ಸಾಧಿಕ್, ಬೇಬಿ ಶೋಯೆಬ್, ಮುಬಾರಾಕ್ ಬಂಧಿತ ಆರೊಪಿಗಳು. ರಂಜಾನ್ ಪ್ರಯುಕ್ತ ನ್ಯಾಷನಲ್ ಚಿಕನ್ ಅಂಗಡಿಯ ವ್ಯಾಪಾರದಲ್ಲಿ ಬಂದ ಟಿಪ್ಸ್ ಹಣದಲ್ಲಿ ನಾಲ್ವರು ಸಮನಾಗಿ ಹಂಚಿಕೊಳ್ಳಬೇಕಿತ್ತು. ಬಂದ ಹಣದಲ್ಲಿ ನನಗೆ ಅಧಿಕ ಪಾಲು ಬೇಕು ಎಂದು ಒಬ್ಬೊರಿಗೊಬ್ಬರು ಗಲಾಟೆ ಆರಂಭಿಸಿದ್ದರು. ಅಲ್ಲದೇ ನಾಲ್ವರು ಕಂಠಪೂರ್ತಿ ಕುಡಿದಿದ್ದರು.

ಆರೋಪಿಗಳು

ಆಗ ಅಲ್ಲೇ ಕೆಲಸ ಮಾಡುತ್ತಿದ್ದ ಸಿಗ್ಮಾತ್ ಜಗಳ ಬಿಡಿಸಲು ಬಂದು, ಸುಮ್ಮನೆ ಯಾಕೆ ಜಗಳ ಮಾಡಿಕೊಳ್ಳುತ್ತಿದ್ದೀರಾ ಬಂದಿರುವ ಹಣವನ್ನು ಸಮನಾಗಿ ಹಂಚಿಕೊಳ್ಳಿ ಎಂದು ಸಲಹೆ ನೀಡಿದರು. ಆದರೆ, ಕೋಪದಲ್ಲಿದ್ದ ಆರೋಪಿಗಳು ನಮ್ಮ ಜಗಳದ ನಡುವೆ ನಿಂದೇನೋ ಎಂದು ಚಾಕುವಿನಿಂದ ಇರಿದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಿಗ್ಮಾತ್​ರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.

ವಶಕ್ಕೆ ಪಡೆದ ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ.ಚನ್ನಣ್ಣನವರ್​ ಹೇಳಿದರು.

ABOUT THE AUTHOR

...view details