ಕರ್ನಾಟಕ

karnataka

ETV Bharat / city

ಮನೆ‌‌‌ ಮನೆಗೆ ಹಾಲಿನ ಪೌಡರ್: ಸಿಎಂಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮನವಿ - bangalore latest news

ರಾಜ್ಯದಲ್ಲಿ 64ಲಕ್ಷ ಶಾಲಾ ಮಕ್ಕಳಿದ್ದು ಅವರುಗಳಿಗೆ ಅರ್ಧ ಕೆಜಿ ಕೆನೆಭರಿತ ಹಾಲಿನ ಪುಡಿಯನ್ನು ನೀಡಿದಾಗ ಅರ್ಧ ಕೆಜಿಗೆ ರೂ.144.37ಆಗುತ್ತೆ. ಸರ್ಕಾರಕ್ಕೆ ರೂ.92.32‌ ಕೋಟಿ ರೂ. ವೆಚ್ಚವಾಗುತ್ತದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

 KMF president Balachandra appeals to CM to give milk powder to home
KMF president Balachandra appeals to CM to give milk powder to home

By

Published : May 27, 2021, 8:30 PM IST

ಬೆಂಗಳೂರು: ರಾಜ್ಯ ಸರ್ಕಾರದಿಂದ ಕ್ಷೀರ ಭಾಗ್ಯ ಯೋಜನೆಯನ್ನು ಮನೆ ಮನೆಗೆ ತಲುಪಿಸಲು ಕೋರಿ ಕೆಎಂಎಫ್ ಅಧ್ಯಕ್ಷರು ಸಿಎಂಗೆ ಮನವಿ ಮಾಡಿದ್ದಾರೆ.

1 ರಿಂದ 10ನೇ ತರಗತಿ ಮಕ್ಕಳಿಗೆ ಕ್ಷೀರ ನೀಡುವ ಈ ಯೋಜನೆ ಇದೀಗ ಕೊರೊನಾ ಹಿನ್ನೆಲೆ ಶಾಲೆ ಬಂದ್ ಆಗಿರುವುದರಿಂದ ಸ್ಥಗಿತವಾಗಿದೆ. ಹೀಗಾಗಿ ಮನೆ ಮನೆಗೆ ಅರ್ಧ ಕೆಜಿ ಹಾಲಿನ ಪೌಡರ್ ಹಂಚಲು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ವಿಧಾನಸೌಧದಲ್ಲಿ ಸಿಎಂರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಸಿಎಂ ಕೂಡ ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದು, ಈ ಯೋಜನೆಗೆ ಪೂರಕವಾಗಿ ಸ್ಪಂದಿಸಿದ್ದಾರೆ. ಆ ಮೂಲಕ ಒಟ್ಟು 64 ಲಕ್ಷ ಮಕ್ಕಳಿಗೆ ಅರ್ಧ ಕೆಜಿ ಹಾಲಿನ ಪೌಡರ್ ಮನೆ ಮನೆಗೆ ಹಂಚಲು ಚಿಂತನೆ ನಡೆಸಲಾಗಿದೆ. ಆದರೆ ಕೋವಿಡ್ 19 ರ ಪ್ರಯುಕ್ತ ಶಾಲೆಗಳು ಮುಚ್ಚಿದ್ದು, ಈ ಸಾಲಿನಲ್ಲಿ ಈವರೆಗೆ ಈ ಯೋಜನೆ ಜಾರಿಗೆ ಬಂದಿಲ್ಲ.

ಮನೆಯಲ್ಲಿರುವ ಮಕ್ಕಳಿಗೆ ಪೌಷ್ಠಿಕಾಂಶ ಹೆಚ್ಚಿಸಲು ಅರ್ಧ ಕೆ.ಜಿ ಯ ಕೆನೆಭರಿತ ಹಾಲಿನ ಪುಡಿಯನ್ನು ನೀಡುವುದು ಸೂಕ್ತವಾಗಿದೆ. ಇದರಿಂದ ಪ್ರತಿ ಶಾಲಾ ಮಗುವು ಪ್ರತಿದಿನ 1ಲೋಟ ಹಾಲನ್ನು ಮಾಡಿ ಕುಡಿಯಬಹುದಾದೆ. ರಾಜ್ಯದಲ್ಲಿ 64ಲಕ್ಷ ಶಾಲಾ ಮಕ್ಕಳಿದ್ದು ಅವರುಗಳಿಗೆ ಅರ್ಧ ಕೆಜಿ ಕೆನೆಭರಿತ ಹಾಲಿನ ಪುಡಿಯನ್ನು ನೀಡಿದಾಗ ಅರ್ಧ ಕೆಜಿಗೆ ರೂ.144.37ಆಗಲಿದೆ. ಸರ್ಕಾರಕ್ಕೆ ರೂ.92.32‌ ಕೋಟಿ ರೂ. ವೆಚ್ಚವಾಗುತ್ತದೆ ಎಂದು ವಿವರಿಸಿದ್ದಾರೆ.

ಅರ್ಧ ಕೆಜಿ ಕೆನೆಭರಿತ ಹಾಲಿನ ಪುಡಿಯನ್ನು 64 ಲಕ್ಷ ಮಕ್ಕಳಿಗೆ ನೀಡಿದ್ದಲ್ಲಿ 3,200 ಮೆಟ್ರಿಕ್ ಟನ್ ಪುಡಿ ಆಗಲಿದ್ದು, ಹಾಲಿನ ರೂಪದಲ್ಲಿ 2.62 ಕೋಟಿ ಲೀಟರ್ ಆಗುತ್ತದೆ. ಇದರಿಂದ ಸರ್ಕಾರ 2.62 ಲಕ್ಷ ಕೋಟಿ ಲೀಟರ್ ಹಾಲನ್ನು ರಾಜ್ಯದ ರೈತರಿಂದ ಖರೀದಿಸಿ ಅವರಿಗೆ ಅನುಕೂಲ ಮಾಡಿಕೊಟ್ಟಂತೆ ಆಗುತ್ತದೆ. ಹೀಗಾಗಿ ಸರ್ಕಾರಕ್ಕೆ 92 ಕೋಟಿ ರೂ. ವೆಚ್ಚ ಆಗಲಿದೆ ಎಂದು ಬಾಲಚಂದ್ರ ಜಾರಕಿಹೊಳಿ ಅವರು ಮನವಿ ಮಾಡಿದ್ದಾರೆ.

ABOUT THE AUTHOR

...view details