ಕರ್ನಾಟಕ

karnataka

ETV Bharat / city

ಕೆಎಂಎಫ್ ಚುನಾವಣೆ ಮುಂದೂಡಿಕೆ: ಹೈಕೋರ್ಟ್​ ಮೆಟ್ಟಿಲೇರಿದ ರೇವಣ್ಣ - High court news

ಕೆಎಂಎಫ್ ಚುನಾವಣೆ ಅಧ್ಯಕ್ಷ ಸ್ಥಾನಕ್ಕೆ ನಿಗದಿಯಾಗಿದ್ದ ಚುನಾವಣೆಯನ್ನು ರಾಜ್ಯ ಸರ್ಕಾರ ದಿಢೀರನೇ ಮುಂದೂಡಿರುವುದನ್ನು ಪ್ರಶ್ನಿಸಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

KMF election postponed: Revanna appeal to High court

By

Published : Jul 30, 2019, 10:55 PM IST

ಬೆಂಗಳೂರು: ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ನಿಗದಿಯಾಗಿದ್ದ ಚುನಾವಣೆಯನ್ನು ರಾಜ್ಯ ಸರ್ಕಾರ ದಿಢೀರನೇ ಮುಂದೂಡಿಕೆ ಮಾಡಿರುವುದನ್ನು ಪ್ರಶ್ನಿಸಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸೇರಿದಂತೆ ಎಂಟು ಜನ ನಿರ್ದೇಶಕರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ರಾಜ್ಯ ಸರ್ಕಾರ ಕೆಎಂಎಫ್ ಚುನಾವಣೆಯ ದಿನಾಂಕವನ್ನ ಮುಂದೂಡಿರುವ ಆದೇಶಕ್ಕೆ ತಡೆ ನೀಡಲು ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಹಾಗೂ ಕೆಎಂಎಫ್‌ನ ರಿಟರ್ನಿಂಗ್ ಆಫೀಸರ್‌ಗೆ ನಿರ್ದೇಶಿಸಬೇಕೆಂದು ಅರ್ಜಿಯಲ್ಲಿ‌ ಮನವಿ ಮಾಡಿದ್ದಾರೆ.

ದಿನಾಂಕ ಘೋಷಣೆಯಾಗಿ ಪ್ರಕ್ರಿಯೆ ಆರಂಭವಾದ ಬಳಿಕ ಚುನಾವಣೆ ರದ್ದುಪಡಿಸಲು ಕಾನೂನಿನಲ್ಲಿ ಅವಕಾಶ ಇಲ್ಲ. ತಕ್ಷಣ ಚುನಾವಣೆ ನಡೆಸಲು ಪ್ರತಿವಾದಿಗಳಿಗೆ ಆದೇಶ ನೀಡಬೇಕೆಂದು ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದಾರೆ.

ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಸಹಕಾರ ಚುನಾವಣೆಯ ಆಯುಕ್ತ ಸೇರಿ ಒಟ್ಟು 6 ಜನರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದ್ದು, ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಾಗಿದೆ.

ABOUT THE AUTHOR

...view details