ಬೆಂಗಳೂರು: ಬಯೋಕಾನ್ ಸಂಸ್ಥಾಪಕರಾದ ಕಿರಣ್ ಮಜುಂದಾರ್ ಶಾ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾಗೆ ಕೊರೊನಾ - Biocon founder Kiran Mazumdar Shaw corona
ದೇಶದಲ್ಲಿ ಕೊರೊನಾ ಹೆಚ್ಚುತ್ತಿದೆ. ಕರ್ನಾಟಕದಲ್ಲೂ ಮಹಾಮಾರಿ ಹಾವಳಿ ಕಡಿಮೆ ಆಗುತ್ತಿಲ್ಲ. ಬಯೋಕಾನ್ ಸಂಸ್ಥಾಪಕರಾದ ಕಿರಣ್ ಮಜುಂದಾರ್ ಶಾ ಅವರಿಗೂ ಕೊರೊನಾ ಸೋಂಕು ತಗುಲಿದೆ.
ಬಯೋಕಾನ್ ಸಂಸ್ಥಾಪಕರಿಗೆ ಕೊರೊನಾ ಪಾಸಿಟಿವ್
ತಮಗೆ ಸೋಂಕು ತಗುಲಿರುವ ಕುರಿತು ಟ್ವೀಟ್ ಮಾಡಿರುವ ಬಯೋಕಾನ್ ಸಂಸ್ಥಾಪಕಿ, ತಮಗೆ ಕೊರೊನಾ ಪಾಸಿಟಿವ್ ಬಂದಿದೆ. ಲಕ್ಷಣಗಳು ಕಂಡು ಬಂದಿವೆ ಎಂದು ಪೋಸ್ಟ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮಜುಂದಾರ್ ಶಾ ಅವರಿಗೆ ಹಲವರು ಬೇಗ ಗುಣಮುಖರಾಗುವಂತೆ ಶುಭ ಹಾರೈಸಿದ್ದಾರೆ.
Last Updated : Aug 18, 2020, 4:45 AM IST