ಕಿಡ್ನಾಪ್ ಮಾಡಿ, ಮೂರು ದಿನ ಕೂಡಿ ಹಾಕಿದ್ರು: ದೂರು ದಾಖಲಿಸಿದ ವರ್ತೂರ್ ಪ್ರಕಾಶ್
21:59 December 01
21:51 December 01
20:09 December 01
ವರ್ತೂರು ಪ್ರಕಾಶ್ ದೂರು
ಬೆಂಗಳೂರು: ನನ್ನನ್ನು ಹಾಗೂ ನನ್ನ ಚಾಲಕನನ್ನು ದುಷ್ಕರ್ಮಿಗಳು ಹಣಕ್ಕಾಗಿ ಅಪಹರಿಸಿ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಬೆಳ್ಳಂದೂರು ಪೊಲೀಸ್ ಠಾಣೆಗೆ ಮಾಜಿ ಸಚಿವ ವರ್ತೂರು ಪ್ರಕಾಶ್ ಇಂದು ಸಂಜೆ ದೂರು ನೀಡಿದ್ದಾರೆ.
ಕೋಲಾರದ ತಮ್ಮ ತೋಟದ ಮನೆಯಿಂದ ಚಾಲಕ ಸೇರಿದಂತೆ ನನ್ನನ್ನು 8 ಮಂದಿ ಅಪಹರಣಕಾರರು ನ.25. ರಂದು ಅಪಹರಿಸಿದ್ದರು. ಬಳಿಕ ಮೂರು ದಿನಗಳ ಕಾಲ ಅಜ್ಞಾತ ಸ್ಥಳದಲ್ಲಿ ಇರಿಸಿಕೊಂಡು, 30 ಕೋಟಿ ರೂ ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.
ನಮ್ಮನ್ನು ಅಪಹರಿಸಿ ಕೋಲಾರ, ಚಿಂತಾಮಣಿ, ಹೊಸಕೋಟೆ ಹಾಗೂ ಕೆ.ಆರ್.ಪುರಂ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಕಾರಿನಲ್ಲಿ ಸುತ್ತಾಡಿಸಿ, ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಯಾರು ಕಿಡ್ನಾಪ್ ಮಾಡಿದ್ದರು ಎಂಬುದು ಗೊತ್ತಿಲ್ಲ. ನಾನು ಹಾಗೂ ಡ್ರೈವರ್ ನ.28ರಂದು ಅಪಹರಣಕಾರರಿಂದ ಹೇಗೋ ತಪ್ಪಿಸಿಕೊಂಡು ಬಂದಿದ್ದೇವೆ. ನಮ್ಮ ಕಾರನ್ನು ಅಪಹರಣಕಾರರು ಇದ್ದ ಸ್ಥಳದಲ್ಲಿಯೇ ಬಿಟ್ಟು ಬಂದಿದ್ದೆ. ಈಗ ಆ ಕಾರು ಬೆಳ್ಳಂದೂರು ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ. ಅದರ ನಂಬರ್ ಪ್ಲೇಟ್ ತೆಗೆದಿದ್ದು, ನಮ್ಮದೇ ಕಾರು ಅಂತ ಗೊತ್ತಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು, ಇಂದು ಬೆಳ್ಳಂದೂರು ಸ್ಮಶಾನದ ಬಳಿ ನಂಬರ್ ಪ್ಲೇಟ್ ಇಲ್ಲದ ಕಾರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಕಾರಿನಲ್ಲಿ ಕಾರದ ಪುಡಿ ಸಹ ಪತ್ತೆಯಾಗಿದೆ.