ದೇವನಹಳ್ಳಿ:ಬೆಂಗಳೂರಿನ ಮೆಜೆಸ್ಟಿಕ್ನಿಂದ ಟ್ರಾಫಿಕ್ ಮಧ್ಯೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು ಸರಿಸುಮಾರು ಒಂದೂವರೆ ತಾಸು ಬೇಕೇಬೇಕು. ಆದರೆ ಕೇವಲ 10 ನಿಮಿಷದಲ್ಲಿ ವಿಮಾನ ನಿಲ್ದಾಣ ತಲುಪಬಹುದು!
ಈ ಯೋಜನೆ ಯಶಸ್ವಿಯಾದ್ರೆ ಮೆಜೆಸ್ಟಿಕ್ನಿಂದ ಏರ್ಪೋರ್ಟ್ ತಲುಪಲು 10 ನಿಮಿಷ ಸಾಕು!
ಸೂಪರ್ ಹೈಸ್ಪೀಡ್ ಹೈಪರ್‌ಲೂಪ್ ಸಾರಿಗೆ ಮೂಲಕ ಕೆಂಪೇಗೌಡ ಏರ್ಪೋರ್ಟ್ಅನ್ನು (ಕೆಐಎ) ನಗರದ ಕೇಂದ್ರ ಭಾಗ ಮೆಜೆಸ್ಟಿಕ್ಗೆ ಸಂಪರ್ಕಿಸುವ ಒಪ್ಪಂದಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್) ಮತ್ತು ವರ್ಜಿನ್ ಹೈಪರ್‌ಲೂಪ್ ಕಂಪನಿ ಸಹಿ ಹಾಕಿವೆ. ಇದು ಕಾರ್ಯರೂಪಕ್ಕೆ ಬಂದ್ರೆ ಮೆಜೆಸ್ಟಿಕ್ನಿಂದ ಕೇವಲ 10 ನಿಮಿಷದಲ್ಲಿ ಏರ್ಪೋರ್ಟ್ ತಲುಪಬಹುದು.
ಹೌದು, ಭವಿಷ್ಯದ ಸಾರಿಗೆಯಾಗಿರುವ ಸೂಪರ್ ಹೈಸ್ಪೀಡ್ ಹೈಪರ್ ಲೂಪ್ ಸಾರಿಗೆ ವ್ಯವಸ್ಥೆಯನ್ನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪಡೆಯಲಿದೆ. ಸೂಪರ್ ಹೈಸ್ಪೀಡ್ ಹೈಪರ್‌ಲೂಪ್ ಸಾರಿಗೆ ಮೂಲಕ ಕೆಂಪೇಗೌಡ ಏರ್ಪೋರ್ಟ್ಅನ್ನು (ಕೆಐಎ) ನಗರದ ಕೇಂದ್ರ ಭಾಗ ಮೆಜೆಸ್ಟಿಕ್ಗೆ ಸಂಪರ್ಕಿಸುವ ಒಪ್ಪಂದಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್) ಮತ್ತು ವರ್ಜಿನ್ ಹೈಪರ್‌ಲೂಪ್ ಕಂಪನಿ ಸಹಿ ಹಾಕಿವೆ. ಇದು ಕಾರ್ಯರೂಪಕ್ಕೆ ಬಂದ್ರೆ ಮೆಜೆಸ್ಟಿಕ್ನಿಂದ ಕೇವಲ 10 ನಿಮಿಷದಲ್ಲಿ ಏರ್ಪೋರ್ಟ್ ತಲುಪಬಹುದು.
ವಿಶ್ವದ ಏಕೈಕ ಹೈಪರ್ ಲೂಪ್ ಕಂಪನಿಯಾದ ವರ್ಜಿನ್ ಹೈಪರ್ ಲೂಪ್ ಮತ್ತು ಡಿಪಿ ವರ್ಲ್ಡ್ ಅಧ್ಯಕ್ಷ ಸುಲ್ತಾನ್ ಬಿನ್ ಸುಲೇಮಾನ್ ಮತ್ತು ಕೆಐಎ ನಿರ್ದೇಶಕರ ಮಂಡಳಿಯ ಅಧ್ಯಕ್ಷ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ವಿಜಯ ಭಾಸ್ಕರ್ ಅವರು ಆನ್ಲೈನ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು.