ಕರ್ನಾಟಕ

karnataka

ETV Bharat / city

ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್​ಗೆ ಚಾಲನೆ ನೀಡಲಿರುವ ಉಪರಾಷ್ಟ್ರಪತಿ - ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ಈ ಕ್ರೀಡಾಕೂಟಕ್ಕೆ ಕೇಂದ್ರ ಹಾಗೂ ರಾಜ್ಯದಿಂದ ಒಟ್ಟು 62 ಕೋಟಿ ರೂ. ಅನುದಾನ ನೀಡಲಾಗಿದೆ. ಇದರಲ್ಲಿ 27 ಕೋಟಿ ರೂ.ರಾಜ್ಯದ ಪಾಲಾಗಿದ್ದರೆ, ಸುಮಾರು 35 ಕೋಟಿ ರೂ. ಕೇಂದ್ರದ ಪಾಲಾಗಿದೆ ಎಂದು ಸಚಿವ ನಾರಾಯಣ ಗೌಡ ಹೇಳಿದರು.

ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್
ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್

By

Published : Apr 22, 2022, 4:19 PM IST

ಬೆಂಗಳೂರು: 'ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್-2021'ಗೆ ಏ.24ರಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಚಾಲನೆ ನೀಡಲಿದ್ದಾರೆ. ಬೆಂಗಳೂರಿನಲ್ಲಿ ಒಂಬತ್ತು ದಿನಗಳ ಕಾಲ‌ ನಡೆಯುವ ಕ್ರೀಡಾಕೂಟದ ಸಿದ್ಧತೆಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ ಎಂದು ಕ್ರೀಡಾ ಸಚಿವ ನಾರಾಯಣ ಗೌಡ ತಿಳಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಕ್ರೀಡಾಕೂಟ ಹೋದ ವರ್ಷವೇ ಆಯೋಜನೆ ಆಗಬೇಕಿತ್ತು. ಆದರೆ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಮುಂದೂಡಲಾಯಿತು. ದೊಡ್ಡ ಮಟ್ಟದ ಈ ಕ್ರೀಡಾಕೂಟ ನಡೆಯಲಿದ್ದು, ಮೇ 3ಕ್ಕೆ ಸಮಾರೋಪಗೊಳ್ಳಲಿದೆ. 210 ವಿಶ್ವವಿದ್ಯಾಲಯಗಳ ಸುಮಾರು 4,500 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಈಗಾಗಲೇ 1 ಸಾವಿರ ಕ್ರೀಡಾಪಟುಗಳು ಆಗಮಿಸಿದ್ದಾರೆ. ಕ್ರೀಡಾಕೂಟದಲ್ಲಿ ಒಟ್ಟು 20 ಕ್ರೀಡೆಗಳಿರಲಿದೆ. ಕರ್ನಾಟಕದಿಂದ ಯೋಗಾಸನ, ಕರಾಟೆ, ಮಲ್ಲಗಂಬ ಸ್ಪರ್ಧೆಗಳನ್ನು ಸೇರಿಸಲಾಗಿದೆ ಎಂದರು.

ಕ್ರೀಡಾಪಟುಗಳ ವಸತಿಗಾಗಿ 2,800 ಕೊಠಡಿಗಳು ಮತ್ತು 2,800ಕ್ಕೂ ಹೆಚ್ಚು ವಾಹನಗಳ ವ್ಯವಸ್ಥೆ ಮಾಡಿದ್ದೇವೆ. ಕೋವಿಡ್ ಮುಂಜಾಗ್ರತಾ ಕ್ರಮಗಳೊಂದಿಗೆ ಕ್ರೀಡಾಕೂಟ ನಡೆಸಲಾಗುವುದು. ಕ್ರೀಡಾಪಟುಗಳಿಗೆ ಎರಡು ಡೋಸ್ ಲಸಿಕೆ ಕಡ್ಡಾಯವಾಗಿ ಆಗಿರಬೇಕು. ಆರ್​ಟಿ-ಪಿಸಿಆರ್ ಪರೀಕ್ಷೆ ಮಾಡಲಾಗುವುದು. ಪಾಸಿಟಿವ್ ಬಂದ ಕ್ರೀಡಾಳುಗಳಿಗೆ ಐಸೋಲೇಷನ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಕ್ರೀಡಾಕೂಟಕ್ಕೆ ಕೇಂದ್ರ ಹಾಗೂ ರಾಜ್ಯದಿಂದ ಒಟ್ಟು 62 ಕೋಟಿ ರೂ. ಅನುದಾನ ನೀಡಲಾಗಿದೆ. ಇದರಲ್ಲಿ 27 ಕೋಟಿ ರೂ.ರಾಜ್ಯದ ಪಾಲಾಗಿದ್ದರೆ, ಸುಮಾರು 35 ಕೋಟಿ ರೂ. ಕೇಂದ್ರದ ಪಾಲಾಗಿದೆ. ಕೇಂದ್ರ ಸರ್ಕಾರ ಕ್ರೀಡಾಕೂಟದ ಮೂಲಭೂತ ಸೌಕರ್ಯಕ್ಕೆ 15 ಕೋಟಿ ರೂ. ಹಾಗೂ ಕ್ರೀಡಾಕೂಟಕ್ಕೆಂದು 19.75 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಸಚಿವರು ವಿವರಿಸಿದರು.

ಇದನ್ನೂ ಓದಿ:ಪಿಎಸ್ಐ ನೇಮಕಾತಿ ಅಕ್ರಮ: ಮತ್ತೋರ್ವ ಕಾಂಗ್ರೆಸ್‌ ಮುಖಂಡನ ಬಂಧಿಸಿದ ಸಿಐಡಿ

ABOUT THE AUTHOR

...view details