ರಾಕಿಂಗ್ ಸ್ಟಾರ್ ಯಶ್ ಅಭಿನಯದ ಹಾಗು ಪ್ರಶಾಂತ್ ನೀಲ್ ನಿರ್ದೇಶನದ ಹಾಗು ನಿರ್ಮಾಪಕ ವಿಜಯ್ ಕುಮಾರ್ ನಿರ್ಮಾಣದ ಹೈ ವೋಲ್ಟೇಜ್ ಕೆಜಿಎಫ್ ಚಾಪ್ಟರ್ 2 ಸಿನಿಮಾ ವಿಶ್ವಾದ್ಯಂತ ತೆರೆ ಕಂಡು ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಕೆಜಿ ರಸ್ತೆಯಲ್ಲಿರೋ ತ್ರಿವೇಣಿ ಚಿತ್ರಮಂದಿರದಲ್ಲಿ ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಿಡುಗಡೆಯಾಗಿದೆ.
ಗಾಂಧಿನಗರದ 4 ಚಿತ್ರಮಂದಿರಗಳಲ್ಲಿ ಕೆಜಿಎಫ್ ಚಾಪ್ಟರ್ 2 ಬಿಡುಗಡೆ- ದಾಖಲೆಗೆ ಫ್ಯಾನ್ಸ್ ಖುಷ್ - KGF movie responses from fans
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಸಿನಿಮಾ ವಿಶ್ವದಾದ್ಯಂತ ಅದ್ಧೂರಿ ತೆರೆ ಕಂಡು, ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಅಂತೆಯೇ ಗಾಂಧಿನಗರದ ನಾಲ್ಕು ಚಿತ್ರಮಂದಿರದಲ್ಲಿ ಒಮ್ಮೆಗೇ ಬಿಡುಗಡೆಗೊಂಡು ಕೆಜಿಎಫ್ ದಾಖಲೆ ಸೃಷ್ಟಿಸಿದೆ.

ಗಾಂಧಿನಗರದ ನಾಲ್ಕು ಚಿತ್ರಮಂದಿರಗಳಲ್ಲಿ ಕೆಜಿಎಫ್ ಚಾಪ್ಟರ್ 2 ಬಿಡುಗಡೆ, ಅಭಿಮಾನಿಗಳ ಪ್ರತಿಕ್ರಿಯೆ
ಗಾಂಧಿನಗರದ ನಾಲ್ಕು ಚಿತ್ರಮಂದಿರಗಳಲ್ಲಿ ಕೆಜಿಎಫ್ ಚಾಪ್ಟರ್ 2 ಬಿಡುಗಡೆ, ಅಭಿಮಾನಿಗಳ ಪ್ರತಿಕ್ರಿಯೆ
ತ್ರಿವೇಣಿಯಲ್ಲಿ ನಾಲ್ಕು ಶೋಗಳು ಹೌಸ್ ಫುಲ್ ಆಗಿದೆ. ತ್ರಿವೇಣಿ ಚಿತ್ರಮಂದಿರದ ಸದಸ್ಯ ರಾಜ್ ಮಾತನಾಡಿ, ನನ್ನ 25 ವರ್ಷದ ಅನುಭವದಲ್ಲಿ ಗಾಂಧಿನಗರದ ನಾಲ್ಕು ಚಿತ್ರಮಂದಿರದಲ್ಲಿ ಒಂದೇ ತೆರೆ ಕಂಡಿರೋದು ಸಿನಿಮಾ ಇದೇ ಮೊದಲು. ಇದು ದಾಖಲೆ ಎಂದು ಹೇಳಿದ್ದಾರೆ. ಸದ್ಯ ತ್ರಿವೇಣಿ ಚಿತ್ರಮಂದಿರದಲ್ಲಿ ಕೆಜಿಎಫ್ ಚಾಪ್ಟರ್ 2 ಉತ್ತಮ ಪ್ರದರ್ಶನ ಕಾಣುತ್ತಿದೆ.
ಓದಿ :ಬೆಂಗಳೂರಿನ ಈ ಥಿಯೇಟರ್ನಲ್ಲಿ ಕೆಜಿಎಫ್ ಚಾಪ್ಟರ್ 2 ವೀಕ್ಷಣೆಗೆ ಬಂದ ಅಭಿಮಾನಿಗಳಿಗೆ ಶಾಕ್!