ಬೆಂಗಳೂರು:ಚಿನ್ನದ ವ್ಯಾಪಾರಿಗಳನ್ನು ಟಾರ್ಗೆಟ್ ಮಾಡಿಕೊಂಡು ಹೈವೇಗಳಲ್ಲಿ ಕಾರು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಕೇರಳದ ಕುಖ್ಯಾತ ಗ್ಯಾಂಗ್ ಅನ್ನು ಮಾದನಾಯಕನಹಳ್ಳಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಒಂದೂವರೆ ತಿಂಗಳ ಹಿಂದೆ ಹಗಲಿನಲ್ಲೇ ರಸ್ತೆಯಲ್ಲಿ ಕೋಟ್ಯಂತರ ರೂಪಾಯಿ ಲೂಟಿ ಮಾಡಿದ ಪ್ರಕರಣ ಬೆಂಗಳೂರು ಗ್ರಾಮಂತರ ಪೊಲೀಸರ ನಿದ್ದೆಗೆಡಿಸಿತ್ತು.
ತುಮಕೂರು ರಸ್ತೆಯ ಮಾದವಾರ ಬಳಿ ಚಿನ್ನದ ವ್ಯಾಪಾರಿ ಫ್ರಾಂಕ್ಲಿನ್ ಮತ್ತು ಸ್ನೇಹಿತರು ಚಿನ್ನ ಮಾರಾಟ ಮಾಡಿ 1 ಕೋಟಿ ಹಣದ ಸಮೇತ ಕನ್ಯಾಕುಮಾರಿ ಕಡೆಗೆ ಹೊರಟಿದ್ದರು. ಈ ವೇಳೆ, ಕಾರು ಅಡ್ಡಗಟ್ಟಿದ್ದ ದರೋಡೆಕೋರರು 1 ಕೋಟಿ ಹಣ ಲೂಟಿ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡ ಮಾದನಾಯಕನಹಳ್ಳಿ ಪೊಲಿಸರು ಸಿಸಿಟಿವಿ ಹಾಗೂ ಸಿಡಿಆರ್ ಮೂಲಕ ಕಾರ್ಯಾಚರಣೆ ನಡೆಸಿ 1 ತಿಂಗಳ ನಂತರ ಕೇರಳದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.
ರಾಜೀವ್, ವಿಷ್ಣುಲಾಲ್, ಸನಾಲ್, ಜಸೀನ್, ರಶೀದ್, ಸನಾಫ್, ಶಫೀಕ್ ಸೇರಿದಂತೆ 10 ದರೋಡೆಕೋರರನ್ನ ಬಂಧಿಸಲಾಗಿದೆ. ಗ್ಯಾಂಗ್ನ ಕಿಂಗ್ಪಿನ್ ಶ್ರೀಧರ್ ಆಲಿಯಾಸ್ ಕೊಡಾಲಿ ಶ್ರೀಧರ್ 90 ಲಕ್ಷ ಹಣದ ಜೊತೆಗೆ ಪರಾರಿಯಾಗಿದ್ದಾನೆ. ಈತನ ಪತ್ತೆಗೆ ವಿಶೇಷ ತಂಡ ಕೂಡ ರಚಿಸಲಾಗಿದೆ.
ಇನ್ನು ಈ ಗ್ಯಾಂಗ್ ದರೋಡೆಗಾಗಿ ಟೋಲ್ ದಾಟಿದ ಬಳಿಕ ಕಾರಿನ ನಂಬರ್ ಪ್ಲೇಟ್ ಚೇಂಜ್ ಮಾಡುತ್ತಿದ್ದರು. ದರೋಡೆ ಮಾಡಿದ ಬಳಿಕ ಅದನ್ನು ಅಡಗಿಸಿಡಲು ಕಾರಿನಲ್ಲಿ ಸೀಕ್ರೆಟ್ ಲಾಕರ್ ಕೂಡ ಮಾಡಿಸಿದ್ದರಂತೆ. ಆರೋಪಿಗಳ ಹೆಡೆ ಮುರಿಕಟ್ಟಲು ಹುಬ್ಬಳ್ಳಿಯಿಂದ ತನಿಖೆ ಶುರುಮಾಡಿದ ಇನ್ಸ್ಪೆಕ್ಟರ್ ಮಂಜುನಾಥ್ ಅಂಡ್ ಟೀಂ ನೂರಾರು ಸಿಸಿಟಿವಿಗಳನ್ನು ಪರಿಶೀಲಿಸಿ ಕೊನೆಗೆ ಕೇರಳದಲ್ಲಿ ಅಡಗಿದ್ದ ಆರೋಪಿಗಳನ್ನ ಬಂಧಿಸಿದ್ದಾರೆ.
ಓದಿ:ಇರಾನ್ನಿಂದ ಆಮದಾದ 205 ಕೆಜಿ ಹೆರಾಯಿನ್ ಪತ್ತೆ..1436 ಕೋಟಿ ಮೌಲ್ಯದ ವಸ್ತು ವಶ