ಬೆಂಗಳೂರು:2021- 22ನೇ ಸಾಲಿನ ಸಿಇಟಿ (CET) ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿಯ ಪರೀಕ್ಷೆಯಲ್ಲಿ ಬಾಲಕಿಯರನ್ನು ಹಿಂದಿಕ್ಕಿದ ಬಾಲಕರು ಮೇಲುಗೈ ಸಾಧಿಸಿದ್ದಾರೆ.
ಮಲ್ಲೇಶ್ವರಂ ಬಳಿ ಇರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದರು. ಇಂಜಿನಿಯರಿಂಗ್ನಲ್ಲಿ ಯಲಹಂಕದ ನ್ಯಾಷನಲ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿಯಾದ ಅಪೂರ್ವ (ಶೇ.97) ಮೊದಲ ಸ್ಥಾನ ಪಡೆದಿದ್ದಾರೆ. ಮಾರತಹಳ್ಳಿಯ ಶ್ರೀಚೈತನ್ಯ ಟೆಕ್ನೋ ಸ್ಕೂಲ್ನ ಸಿದ್ಧಾರ್ಥ್ ಸಿಂಗ್ (ಶೇ.97) ದ್ವಿತೀಯರಾಗಿದ್ದಾರೆ.
ಕೆಇಎ ವೆಬ್ಸೈಟ್ kea.kar.nic.in ನಲ್ಲಿಯೂ ಫಲಿತಾಂಶ ವೀಕ್ಷಿಸಬಹುದಾಗಿದೆ. ಜೂನ್ 16 ರಿಂದ 18ರವರೆಗೆ ಇಂಜಿನಿಯರಿಂಗ್, ಕೃಷಿ, ಪಶು ವೈದ್ಯಕೀಯ, ಫಾರ್ಮಸಿ ಹೀಗೆ ಮುಂತಾದ ವೃತ್ತಿಪರ ಕೋರ್ಸುಗಳಿಗೆ ಪರೀಕ್ಷೆ ನಡೆದಿತ್ತು. ಸೆಪ್ಟೆಂಬರ್ 1 ರಿಂದ ದಾಖಲೆಗಳ ಪರಿಶೀಲನೆ ಆರಂಭ
ರ‍್ಯಾಂಕ್ಪಡೆದವರ ವಿವರ
ಇಂಜಿನಿಯರಿಂಗ್
1. ಅಪೂರ್ವ ಟಂಡನ್, ನ್ಯಾಷನಲ್ ಪಬ್ಲಿಕ್ ಸ್ಕೂಲ್ ಯಲಹಂಕ, ಬೆಂಗಳೂರು
2.ಸಿದ್ದಾರ್ಥ ಸಿಂಗ್,ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ಮಾರತ್ತಹಳ್ಳಿ, ಬೆಂಗಳೂರು
3. ಆತ್ಮುಕರಿ ವೆಂಕಟ ಮಾಧವನ್, ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ಮಾರತ್ತಹಳ್ಳಿ, ಬೆಂಗಳೂರು
ಯೋಗ ವಿಜ್ಞಾನ
1. ಕೃಷಿಕೇಶ್ ನಾಗಭೂಷಣ,ನ್ಯಾಷನಲ್ ಸೆಂಟರ್ ಫಾರ್ ಎಕ್ಸಲೆನ್ಸ್, ಬೆಂಗಳೂರು
2. ವೆಂಕಟೇಶ್ ವೀಣಾಧರ್ ಶೆಟ್ಟಿ, ಮಾಧವ ಕೃಪಾ ಇಂಗ್ಲಿಷ್ ಸ್ಕೂಲ್ ಮಣಿಪಾಲ್, ಉಡುಪಿ
3.ಎಸ್.ಆರ್. ಕೃಷ್ಣ,ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ಬೆಂಗಳೂರು