ಕರ್ನಾಟಕ

karnataka

ETV Bharat / city

ಕಾಸರಗೋಡು ಯುವತಿ ಅತ್ಯಾಚಾರ ಪ್ರಕರಣ: ಪೊಲೀಸ್ ಆಯುಕ್ತರಿಗೆ ದೂರು ನೀಡಿದ ಶೋಭಾ ಕರಂದ್ಲಾಜೆ

ಕೇರಳದ ಕಾಸರಗೋಡು ಯುವತಿ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ಸಂತ್ರಸ್ತೆಯ ತಾಯಿ ಜೊತೆ ಶೋಭಾ ಕರಂದ್ಲಾಜೆ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿ ಕಮಿಷನರ್ ಭಾಸ್ಕರ್ ರಾವ್​ ಅವರಿಗೆ ದೂರು ನೀಡಿದ್ದಾರೆ.

Shobha  Karandlaje
ಶೋಭಾ ಕರಂದ್ಲಾಜೆ

By

Published : Jan 5, 2020, 1:36 PM IST

ಬೆಂಗಳೂರು: ಕೇರಳದ ಕಾಸರಗೋಡು ಯುವತಿ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ಸಂತ್ರಸ್ತೆಯ ತಾಯಿ ಜೊತೆ ಶೋಭಾ ಕರಂದ್ಲಾಜೆ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿ ಕಮಿಷನರ್ ಭಾಸ್ಕರ್ ರಾವ್​ ಅವರಿಗೆ ದೂರು ನೀಡಿದ್ದಾರೆ.

ಕಮಿಷನರ್ ಭಾಸ್ಕರ್ ರಾವ್​ ಅವರಿಗೆ ದೂರು ನೀಡಿದ ಶೋಭಾ ಕರಂದ್ಲಾಜೆ

ದೂರು ನೀಡಿದ ಬಳಿಕ ಮಾತನಾಡಿ, ನಿನ್ನೆ ಸಂತ್ರಸ್ತ ಯುವತಿಯ ಕುಟುಂಬದವರು ನನ್ನನ್ನು ಸಂಪರ್ಕಿಸಿದ್ದರು. ಅವಳ ಕಥೆ ಕೇಳಿ ನನಗೆ ತೀರಾ ಬೇಸರವಾಗಿದೆ. ಹುಡುಗಿ ಅಪ್ರಾಪ್ತೆಯಾಗಿದ್ದಾಗ ಕಾಸರಗೋಡಿನ ಮಸೂಕ್ ಮತ್ತು ರಿಷಬ್ ಎಂಬ ಇಬ್ಬರು ಯುವಕರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಆರೋಪಿಗಳು ಕಾಸರಗೋಡು, ಮಂಗಳೂರು ಹಾಗೂ ಬೆಂಗಳೂರಲ್ಲಿ ಯುವತಿಯನ್ನು ಕಾರಲ್ಲಿ ಕರೆತಂದು ಅತ್ಯಾಚಾರ ನಡೆಸಿದ್ದಾರೆ. ಆರೋಪಿಗಳಿಬ್ಬರು ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದಾರೆ ಅನ್ನೋದರ ಬಗ್ಗೆ ಮಾಹಿತಿ ಇದೆ ಎಂದರು.

ಇನ್ನು ಅತ್ಯಾಚಾರ ಮಾಡಿರುವ ಜೊತೆಗೆ, ನಿಮ್ಮ ಇಡೀ ಕುಟುಂಬ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಬೇಕು ಎಂದು ಬೆದರಿಕೆ ಹಾಕಿದ್ದಾರೆ. ಈ ಕುರಿತು ದೂರು ದಾಖಲಿಸಿಕೊಳ್ಳಬೇಕೆಂದು ನಗರ ಪೊಲೀಸ್​ ಆಯುಕ್ತ ಭಾಸ್ಕರ್ ರಾವ್ ಅವರಿಗೆ ತಿಳಿಸಿದ್ದು, ಈ ಕುರಿತು ದೂರು ನೀಡಿದರು.

ಇದಕ್ಕೂ ಮುಂಚೆ ಸಿಎಂ ಧವಳಗಿರಿ ನಿವಾಸಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಭೇಟಿ ನೀಡಿ, ಅತ್ಯಾಚಾರ ಪ್ರಕರಣವನ್ನ ಖಂಡಿಸಿ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಂತ್ರಸ್ತೆ ತಾಯಿಯನ್ನು ಭೇಟಿ ಮಾಡಿಸಿದರು. ಜೊತೆಗೆ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ABOUT THE AUTHOR

...view details