ಕರ್ನಾಟಕ

karnataka

ETV Bharat / city

ಡಿಕೆಶಿ ಭೇಟಿ ಮಾಡಿದ ಕಾಂಗ್ರೆಸ್ ಯುವ ನಾಯಕ ಕಾರ್ತಿ ಚಿದಂಬರಂ - ಡಿಕೆಶಿ ಭೇಟಿ ಮಾಡಿದ ಕಾರ್ತಿ ಚಿದಂಬರಂ

ಸುಭದ್ರ ನಾಯಕತ್ವದ ಕೊರತೆ ಹಾಗೂ ಆಂತರಿಕ ಕಚ್ಚಾಟದಿಂದ ಪ್ರಾದೇಶಿಕ ಪಕ್ಷಗಳು ಸಾಕಷ್ಟು ದುರ್ಬಲಗೊಂಡಿವೆ. ಸೂಕ್ತ ನಾಯಕತ್ವ ವಹಿಸುವಲ್ಲಿ ಕೊರತೆ ಇದೆ. ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ಮುರಿದು ಕಾಂಗ್ರೆಸ್ ಬಲ ಹೆಚ್ಚಿಸಿಕೊಳ್ಳುವ ವಿಚಾರಗಳ ಕುರಿತು ಕಾರ್ತಿ ಚಿದಂಬರಂ ಚರ್ಚಿಸಿದ್ದಾರೆ.

DK Shivakumar
ಕಾರ್ತಿ ಚಿದಂಬರಂ

By

Published : Oct 18, 2020, 1:01 PM IST

Updated : Oct 18, 2020, 1:22 PM IST

ಬೆಂಗಳೂರು:ಕೇಂದ್ರದ ಮಾಜಿ ಸಚಿವ ಚಿದಂಬರಂ ಅವರ ಪುತ್ರ, ಸಂಸದ, ಉದ್ಯಮಿ ಕಾರ್ತಿ ಚಿದಂಬರಂ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಭಾನುವಾರ ಸೌಜನ್ಯದ ಭೇಟಿ ಮಾಡಿ, ಮಾತುಕತೆ ನಡೆಸಿದರು.

ಡಿಕೆಶಿ ಭೇಟಿ ಮಾಡಿದ ಕಾರ್ತಿ ಚಿದಂಬರಂ

2021ರಲ್ಲಿ ತಮಿಳುನಾಡು ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಈ ಸಂದರ್ಭ ಕಾಂಗ್ರೆಸ್ ಪಕ್ಷದ ಪರ ಪ್ರಚಾರ, ಗೆಲುವಿಗೆ ರಣತಂತ್ರ ರೂಪಿಸುವುದು ಹಾಗೂ ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ಮುರಿದು ಕಾಂಗ್ರೆಸ್ ಬಲ ಹೆಚ್ಚಿಸಿಕೊಳ್ಳುವ ವಿಚಾರಗಳ ಕುರಿತು ಈ ಸಂದರ್ಭ ಕಾರ್ತಿ ಚಿದಂಬರಂ ಚರ್ಚಿಸಿದ್ದಾರೆ.

ತಮಿಳುನಾಡಿನಲ್ಲಿ ಹಲವು ದಶಕಗಳಿಂದ ಎಐಎಡಿಎಂಕೆ ಹಾಗೂ ಡಿಎಂಕೆ ಪಕ್ಷಗಳು ಅಧಿಕಾರ ನಡೆಸುತ್ತಾ ಬಂದಿವೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಇಲ್ಲಿ ನೆಲೆ ಕಾಣುವಲ್ಲಿ ವಿಫಲವಾಗಿವೆ. ಆದರೆ, ಪ್ರಬಲ ಹಾಗೂ ಜನನಾಯಕರಾಗಿದ್ದ ಡಿಎಂಕೆಯ ಕರುಣಾನಿಧಿ ಹಾಗೂ ಎಐಎಡಿಎಂಕೆಯ ಜಯಲಲಿತಾ ಅವರು ನಿಧನರಾಗಿರುವ ಹಿನ್ನೆಲೆ ಇದೇ ಮೊದಲ ಬಾರಿಗೆ ತಮಿಳುನಾಡಿನ ಇಬ್ಬರು ದಿಗ್ಗಜ ರಾಜಕಾರಣಿಗಳ ಅನುಪಸ್ಥಿತಿಯಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ.

ಸುಭದ್ರ ನಾಯಕತ್ವದ ಕೊರತೆ ಹಾಗೂ ಆಂತರಿಕ ಕಚ್ಚಾಟದಿಂದ ಪ್ರಾದೇಶಿಕ ಪಕ್ಷಗಳು ಸಾಕಷ್ಟು ದುರ್ಬಲಗೊಂಡಿವೆ. ಸೂಕ್ತ ನಾಯಕತ್ವ ವಹಿಸುವಲ್ಲಿ ಕೊರತೆ ಇದೆ. ಈ ಹಿನ್ನೆಲೆ ತಮಿಳುನಾಡಿನಲ್ಲಿ ಸಾಧ್ಯವಾದಷ್ಟು ಹೆಚ್ಚು ಸ್ಥಾನ ಗೆಲ್ಲುವ ಅಥವಾ ಅಧಿಕಾರಕ್ಕೆ ಬರುವ ಅವಕಾಶ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್​​​ಗೆ ಇದ್ದು ಇದನ್ನು ಸಮರ್ಥವಾಗಿ ಬಳಸಿಕೊಳ್ಳಲು ಪಕ್ಷ ಮುಂದಾಗಿದೆ. ಈ ನಿಟ್ಟಿನಲ್ಲಿ ಅಕ್ಕಪಕ್ಕದ ರಾಜ್ಯದ ಕಾಂಗ್ರೆಸ್ ಜನಪ್ರಿಯ ನಾಯಕರನ್ನು ಭೇಟಿ ಮಾಡಿ ಕಾರ್ತಿ ಚಿದಂಬರಂ ಚರ್ಚಿಸುತ್ತಿದ್ದಾರೆ.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನ ಗಳಿಸುವಂತೆ ಮಾಡಲು ಶ್ರಮಿಸುತ್ತಿರುವ ಅವರು, ಪಕ್ಷದ ಗೆಲುವಿಗೆ ರಣತಂತ್ರ ರೂಪಿಸುವುದು ಹಾಗೂ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುವ ಕುರಿತು ಅಕ್ಕಪಕ್ಕದ ರಾಜ್ಯದ ಜನಪ್ರಿಯ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಚರ್ಚಿಸುವ ಕಾರ್ಯ ಮಾಡುತ್ತಿದ್ದಾರೆ.

2021ರ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ತಮಿಳುನಾಡು ಕಾಂಗ್ರೆಸ್ ನಾಯಕರು, ಈಗಿನಿಂದಲೇ ಅಗತ್ಯ ಸಿದ್ಧತೆ ಕೈಗೊಳ್ಳುತ್ತಿದ್ದಾರೆ. ಇದರ ಭಾಗವಾಗಿಯೇ ಇಂದು ಕಾರ್ತಿ ಚಿದಂಬರಂ ಮಹಾನಗರಕ್ಕೆ ಆಗಮಿಸಿದ್ದು, ಡಿಕೆ ಶಿವಕುಮಾರ್ ರನ್ನ ಭೇಟಿ ಮಾಡಿದ್ದಾರೆ. ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಇತರ ನಾಯಕರನ್ನು ಸಹ ಭೇಟಿ ಮಾಡುವ ಸಾಧ್ಯತೆ ಇದೆ.

Last Updated : Oct 18, 2020, 1:22 PM IST

ABOUT THE AUTHOR

...view details