ಬೆಂಗಳೂರು: ಕೋವಿಡ್ ಲಾಕ್ಡೌನ್ನಿಂದಾಗಿ ಕುವೈತ್ನಲ್ಲಿ ಸಿಲುಕಿರುವ ಕನ್ನಡಿಗರು ತಮ್ಮನ್ನು ಭಾರತಕ್ಕೆ ಕರೆಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಕೋವಿಡ್ ತಂದಿಟ್ಟ ಸಂಕಷ್ಟ: ಕುವೈತ್ನಲ್ಲಿರುವ ಕನ್ನಡಿಗರ ಸ್ಥಿತಿ ಅತಂತ್ರ
ಕೆಲಸಕ್ಕಾಗಿ ರಾಜ್ಯದ ವಿವಿಧ ಭಾಗಗಳಿಂದ ಕುವೈತ್ಗೆ ತೆರಳಿದ ಅನೇಕ ಯುವಕರು ಇದೀಗ ಸಂಕಷ್ಟದಲ್ಲಿದ್ದು, ತಮ್ಮನ್ನು ಭಾರತಕ್ಕೆ ಕರೆಸಿಕೊಳ್ಳುವಂತೆ ಅಂಗಲಾಚುತ್ತಿದ್ದಾರೆ.
ಕಲಬುರಗಿ, ಬೀದರ್ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಅನೇಕ ಯುವಕರು ಕೆಲಸದ ಸಲುವಾಗಿ ಕುವೈತ್ಗೆ ಹೋಗಿದ್ದರು. ಈ ರೀತಿ ಹೋದವರು ಈಗ ಸಂಕಷ್ಟದಲ್ಲಿದ್ದಾರೆ. ಪಾಸ್ಪೋರ್ಟ್ ಸೇರಿದಂತೆ ಹಲವು ದಾಖಲಾತಿಗಳನ್ನು ತಮ್ಮ ವಶಕ್ಕೆ ಪಡೆದಿರುವ ಅಲ್ಲಿನ ಕಂಪನಿಗಳು ಇವರನ್ನು ದೇಶಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿಲ್ಲ.
ಈ ಕುರಿತು ವಿಡಿಯೊ ರೆಕಾರ್ಡ್ ಮಾಡಿರುವ ಯುವಕರು, ಕೊರೊನಾದಿಂದಾಗಿ ಇಲ್ಲಿ ಲಾಕ್ಡೌನ್ ಹೇರಲಾಗಿದ್ದು ನಮಗಿಲ್ಲಿ ಉದ್ಯೋಗವೂ ಇಲ್ಲ, ತಿನ್ನಲು ಊಟವೂ ಇಲ್ಲದಂತಾಗಿದೆ. ಸುಮಾರು 200 ಮಂದಿ ಕನ್ನಡಿಗರ ಬದುಕು ಅತಂತ್ರವಾಗಿದೆ. ನಮ್ಮನ್ನು ದೇಶಕ್ಕೆ ಕರೆಯಿಸಿಕೊಳ್ಳಿ ಎಂದು ತಮ್ಮ ಅಳಲು ತೋಡಿಕೊಂಡು ರಾಜ್ಯ-ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.