ಕರ್ನಾಟಕ

karnataka

ಅನ್ ಲಾಕ್ ಭವಿಷ್ಯ ನಿರ್ಧರಿಸಲು ಸಿಎಂ ನೇತೃತ್ವದಲ್ಲಿ ಸಭೆ

By

Published : Jun 10, 2021, 7:29 PM IST

Updated : Jun 10, 2021, 7:43 PM IST

ಲಾಕ್ ಡೌನ್ ಜೂನ್ 14 ಕ್ಕೆ ಮುಕ್ತಾಯಗೊಳ್ಳಲಿದ್ದು, ಅನ್ ಲಾಕ್ ಪ್ರಕ್ರಿಯೆ ಯಾವ ರೀತಿ ಇರಬೇಕು, ಎಷ್ಟು ಹಂತದಲ್ಲಿ ಅನ್ ಲಾಕ್ ಮಾಡಬೇಕು, ಯಾವ ವಲಯಕ್ಕೆ ಅನ್ ಲಾಕ್ ವೇಳೆ ಆದ್ಯತೆ ನೀಡಬೇಕು ಎನ್ನುವ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ.

ಅನ್ ಲಾಕ್ ಭವಿಷ್ಯ ನಿರ್ಧರಿಸಲು ಸಿಎಂ ನೇತೃತ್ವದಲ್ಲಿ ಸಭೆ ಆರಂಭ
ಅನ್ ಲಾಕ್ ಭವಿಷ್ಯ ನಿರ್ಧರಿಸಲು ಸಿಎಂ ನೇತೃತ್ವದಲ್ಲಿ ಸಭೆ ಆರಂಭ

ಬೆಂಗಳೂರು: ರಾಜ್ಯದಲ್ಲಿ ಅನ್ ಲಾಕ್ ಪ್ರಕ್ರಿಯೆ ಆರಂಭಿಸುವ ಕುರಿತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಗುತ್ತಿದೆ. ಎಲ್ಲೆಲ್ಲಿ ಅನ್ ಲಾಕ್ ಎನ್ನುವ ಬಗ್ಗೆ ಸಭೆಯಲ್ಲಿ ನಿರ್ಧಾರವಾಗಲಿದೆ.

ಗೃಹ ಕಚೇರಿ ಕೃಷ್ಣಾದಲ್ಲಿ ಕೋವಿಡ್ ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳ ಸಭೆ ಆರಂಭಗೊಂಡಿದ್ದು, ಡಿಸಿಎಂ ಅಶ್ವತ್ಥನಾರಾಯಣ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವರಾದ ಜಗದೀಶ್ ಶೆಟ್ಟರ್, ಆರ್.ಅಶೋಕ್, ಅರವಿಂದ ಲಿಂಬಾವಳಿ, ಸುಧಾಕರ್, ಸೋಮಣ್ಣ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಭಾಗಿಯಾಗಿದ್ದಾರೆ.

ಲಾಕ್​ಡೌನ್ ಜೂನ್ 14 ಕ್ಕೆ ಮುಕ್ತಾಯಗೊಳ್ಳಲಿದ್ದು, ಅನ್ ಲಾಕ್ ಪ್ರಕ್ರಿಯೆ ಯಾವ ರೀತಿ ಇರಬೇಕು, ಎಷ್ಟು ಹಂತದಲ್ಲಿ ಅನ್ ಲಾಕ್ ಮಾಡಬೇಕು, ಯಾವ ವಲಯಕ್ಕೆ ಅನ್ ಲಾಕ್ ವೇಳೆ ಆದ್ಯತೆ ನೀಡಬೇಕು ಎನ್ನುವ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ.

ಅಲ್ ಲಾಕ್ ಜಾರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೆಚ್ಚಿನ ಒಲವು ತೋರಿದ್ದು, ಬೆಂಗಳೂರು ನಗರ ಜಿಲ್ಲೆ ಸೇರಿದಂತೆ‌ 22 ಜಿಲ್ಲೆಗಳಲ್ಲಿ ಜೂನ್ 14 ರಿಂದ ಅನ್ ಲಾಕ್ ಪ್ರಕ್ರಿಯೆ ಆರಂಭ ಬಹುತೇಕ ಖಚಿತವಾಗಿದೆ. ಬಾಕಿ 8 ಜಿಲ್ಲೆಗಳಲ್ಲಿ ಅನ್ ಲಾಕ್ ಆರಂಭ ಜೂನ್ 14 ರಿಂದ ಮಾಡಬೇಕೋ ಅಥವಾ ಜೂನ್ 21 ರಿಂದ ಮಾಡಬೇಕೋ ಎನ್ನುವ ಕುರಿತು ಚರ್ಚಿಸಲಾಗುತ್ತಿದ್ದು, ಸಭೆಯ ಅಂತ್ಯದಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.

ಸಭೆ ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಿದ್ದು, ಅನ್ ಲಾಕ್ ಯಾವಾಗ, ಎಷ್ಟು ಜಿಲ್ಲೆಗೆ ಅನ್ವಯ, ಯಾವುದಕ್ಕೆಲ್ಲಾ ಅವಕಾಶ ಎನ್ನುವುದು ಕೆಲ ಸಮಯದಲ್ಲೇ ಬಹಿರಂಗವಾಗಲಿದೆ

Last Updated : Jun 10, 2021, 7:43 PM IST

ABOUT THE AUTHOR

...view details