ಬೆಂಗಳೂರು: ಸರಕು ಸಾಗಾಣಿಕೆ ವಲಯದಲ್ಲಿ ಉದ್ಯೋಗಾವಕಾಶ ಹೆಚ್ಚಿಸಲು ಹಾಗೂ ಕೈಗಾರಿಕೆಗಳಿಗೆ ಅಗತ್ಯವಿರುವ ಮಾನವ ಸಂಪನ್ಮೂಲ ಒದಗಿಸುವ ಉದ್ದೇಶದಿಂದ ಲಾಜಿಸ್ಟಿಕ್ಸ್ ಸೆಕ್ಟರ್ ಸ್ಕಿಲ್ಸ್ ಕೌನ್ಸಿಲ್ನೊಂದಿಗೆ ಕರ್ನಾಟಕದ ಮೂರು ವಿವಿಗಳಾದ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ, ಮಂಡ್ಯ ವಿಶ್ವವಿದ್ಯಾಲಯ ಮತ್ತು ನೃಪತುಂಗ ವಿಶ್ವವಿದ್ಯಾಲಯ ಒಪ್ಪಂದಕ್ಕೆ ಸಹಿ ಹಾಕಿವೆ.
ಕರ್ನಾಟಕದ 3 ವಿವಿಗಳೊಂದಿಗೆ ಲಾಜಿಸ್ಟಿಕ್ಸ್ ಸೆಕ್ಟರ್ ಸ್ಕಿಲ್ಸ್ ಕೌನ್ಸಿಲ್ ಒಪ್ಪಂದ: ಲಾಭವೇನು? - ನೃಪತುಂಗ ವಿಶ್ವವಿದ್ಯಾಲಯ
ಲಾಜಿಸ್ಟಿಕ್ಸ್ ಸೆಕ್ಟರ್ ಸ್ಕಿಲ್ಸ್ ಕೌನ್ಸಿಲ್ನೊಂದಿಗೆ ಕರ್ನಾಟಕದ ಮೂರು ವಿವಿಗಳಾದ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ, ಮಂಡ್ಯ ವಿಶ್ವವಿದ್ಯಾಲಯ ಮತ್ತು ನೃಪತುಂಗ ವಿಶ್ವವಿದ್ಯಾಲಯ ಒಪ್ಪಂದ ಮಾಡಿಕೊಂಡಿದೆ.
ಸರಕು ಸಾಗಣೆ ವಲಯದಲ್ಲಿ ಉದ್ಯೋಗಾವಕಾಶ
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಶುಕ್ರವಾರ ಕೌಶಲ್ಯಾಭಿವೃದ್ಧಿ ಇಲಾಖೆ ಆಯೋಜಿಸಿದ್ದ ಸರಕು ಸಾಗಾಣಿಕೆ ವಲಯಕ್ಕೆ ಸಂಬಂಧಿಸಿದಂತೆ ಇಂಡಸ್ಟ್ರಿ ಕನೆಕ್ಟ್ ಕಾನಕ್ಲೇವ್ನಲ್ಲಿ ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಸಮ್ಮುಖದಲ್ಲಿ ಒಪ್ಪಂದಕ್ಕೆ ಪರಸ್ಪರ ಸಹಿ ಹಾಕಲಾಯಿತು. ಈ ಮೂಲಕ ಸರಕು ಸಾಗಣೆ ವಲಯದಲ್ಲಿ ಉದ್ಯೋಗ ಕಲ್ಪಿಸಲು ಶೈಕ್ಷಣಿಕ ಮತ್ತು ಉದ್ಯೋಗದಾತರನ್ನು ಒಂದು ಕಡೆ ಸೇರಿಸಲು ಸಾಧ್ಯವಾಗಿದೆ.
ಹೊಸ ಕೋರ್ಸ್ ಪ್ರಾರಂಭ:ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದಲ್ಲಿ ಇ-ಕಾಮರ್ಸ್ ಬಿಬಿಎ, ಮಂಡ್ಯ ವಿಶ್ವವಿದ್ಯಾಲಯದಲ್ಲಿ ಲಾಜಿಸ್ಟಿಕ್ಸ್ ವಿಷಯದಲ್ಲಿ ಬಿ.ಕಾಂ. ಹಾಗೂ ನೃಪತುಂಗ ವಿಶ್ವವಿದ್ಯಾಲಯದಲ್ಲಿ ವಾಯುಯಾನದಲ್ಲಿ ಬಿಬಿಎ ಮತ್ತ ಏರ್ ಕಾರ್ಗೋ ಕೋರ್ಸ್ ಪ್ರಾರಂಭಿಸಲಾಗುವುದು ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಯುವಕರಿಗೆ ಅವಕಾಶ:ಸಮಾವೇಶ ಉದ್ಘಾಟಿಸಿದ ಕೌಶಲ್ಯಾಭಿವೃದ್ಧಿ ಸಚಿವ ಅಶ್ವತ್ಥನಾರಾಯಣ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ, ಭವಿಷ್ಯದ ಭಾರತಕ್ಕಾಗಿ ಯುವಕರನ್ನು ಸಜ್ಜುಗೊಳಿಸಲು ಅವಕಾಶ ಮಾಡಿಕೊಡುತ್ತದೆ ಎಂದು ಹೇಳಿದರು.
ಅಕಾಡೆಮಿ ಮತ್ತು ಉದ್ಯಮಗಳು ಒಗ್ಗೂಡಬೇಕು:ಎನ್ಇಪಿಯು ಶಿಕ್ಷಣಶಾಸ್ತ್ರಗಳಲ್ಲಿ ಒಂದಾಗಿದೆ. ಉದ್ಯೋಗಸ್ಥಳ ಸಂಸ್ಕೃತಿಗೆ ವಿದ್ಯಾರ್ಥಿಗಳನ್ನು ಸಂವೇದನಾಶೀಲಗೊಳಿಸುವ, ಉದ್ಯಮಗಳಿಂದ ವಿದ್ಯಾರ್ಥಿಗಳಿಗೆ ರಚಿಸಲಾದ ಇಂಟರ್ನ್ಶಿಪ್ ಮತ್ತು ಅಪ್ರೆಂಟಿಸ್ಶಿಪ್ ಅವಕಾಶಗಳನ್ನು ಒದಗಿಸಲಾಗುತ್ತದೆ. ಉದ್ಯೋಗದ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಈ ಉಪಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅಕಾಡೆಮಿ ಮತ್ತು ಉದ್ಯಮಗಳು ಒಗ್ಗೂಡಬೇಕಾಗಿದೆ ಎಂದರು.
ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್ ಸೆಲ್ವಕುಮಾರ್, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಅಶ್ವಿನ್ ಡಿ ಗೌಡ, ಭಾರತೀಯ ಲಾಜಿಸ್ಟಿಕ್ ಸ್ಕಿಲ್ ಕೌನ್ಸಿಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವಿಕಾಂತ್, ಫ್ಲಿಪ್ ಕಾರ್ಟ್ನ ಮುಖ್ಯ ಆಪರೇಟಿಂಗ್ ಅಧಿಕಾರಿ ಕೃಷ್ಣ ರಾಘವನ್ ಮುಂತಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ:ಪ್ರತಿಯೊಬ್ಬರೂ 5 ಗಿಡ ಬೆಳೆಸಿ: ಜನತೆಗೆ ಮುಖ್ಯಮಂತ್ರಿ ಬೊಮ್ಮಾಯಿ ಕರೆ