ಕರ್ನಾಟಕ

karnataka

ETV Bharat / city

ಪ್ರವಾಸೋದ್ಯಮ ಆದಾಯ ಕುಸಿತ: ಸಿಎಂಗೆ 6 ಅಂಶಗಳ ಮನವಿ ಪತ್ರ ಸಲ್ಲಿಸಿದ ಕರ್ನಾಟಕ ಟೂರಿಸಂ ಸೊಸೈಟಿ - ಬೆಂಗಳೂರು ಸುದ್ದಿ

ಲಾಕ್​ಡೌನ್‌ನಿಂದಾಗಿ ಹಲವಾರು ಕ್ಷೇತ್ರಗಳು ನಷ್ಟದ ಹಾದಿ ಹಿಡಿದಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಟೂರಿಸಂ ಸೊಸೈಟಿ ಸೆಕ್ರೆಟರಿ ಮಹಾಲಿಂಗಯ್ಯ ವಿಡಿಯೋ ಮೂಲಕ ಸರಕಾರಕ್ಕೆ ಮನವಿ ಮಾಡಿದ್ದಾರೆ.

Karnataka Tourism Society
Karnataka Tourism Society

By

Published : May 31, 2021, 11:03 AM IST

ಬೆಂಗಳೂರು:ಲಾಕ್​ಡೌನ್​ನಿಂದ ಪ್ರವಾಸೋದ್ಯಮಕ್ಕೆ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಕರ್ನಾಟಕ ಟೂರಿಸಂ ಸೊಸೈಟಿ ಸೆಕ್ರೆಟರಿ ಮಹಾಲಿಂಗಯ್ಯ ವಿಡಿಯೋ ಮೂಲಕ ಸರಕಾರಕ್ಕೆ ಮನವಿ ಮಾಡಿದ್ದಾರೆ. ಅಲ್ಲದೆ ಪತ್ರದ ಮೂಲಕವೂ ಸಿಎಂಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಸಿಎಂಗೆ ಮನವಿ ಸಲ್ಲಿಸಿದ ಕರ್ನಾಟಕ ಟೂರಿಸಂ ಸೊಸೈಟಿ

ಲಾಕ್​ಡೌನ್​ನಿಂದ ಪ್ರವಾಸೋದ್ಯಮ ಆದಾಯ ಕುಸಿತವಾಗಿದೆ. ಆಸ್ತಿ ತೆರಿಗೆಯನ್ನು ಮೇ 31 ರೊಳಗಾಗಿ ಕಟ್ಟಬೇಕಾಗಿದೆ. ಆದರೆ ಲಾಕ್​ಡೌನ್​ನಿಂದಾಗಿ ನಮ್ಮ ಇಂಡಸ್ಟ್ರೀ ಪೂರ್ತಿ ಲಾಸ್ ನಲ್ಲಿದೆ. ಹಾಗಾಗಿ ಎರಡು ಕಂತಿನಲ್ಲಿ ಕಟ್ಟಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಸಿಎಂಗೆ ಸಲ್ಲಿಸಿದ ಆರು ಅಂಶಗಳ ಮನವಿ ಪತ್ರ

ಮೊದಲ ಕಂತನ್ನು ಅಕ್ಟೋಬರ್‌ 31ರೊಳಗೆ ಕಟ್ಟಲು ಪ್ರಯತ್ನ ಮಾಡುತ್ತೇವೆ. ಎರಡನೇ ಕಂತನ್ನು , 2022ರ ಮಾರ್ಚ್ 31 ರವರೆಗೆ ಕಟ್ಟಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಬಾರ್ ಲೈಸನ್ಸನ್ನು ಜೂನ್ ನಲ್ಲಿ ಪೂರ್ಣ ಪಾವತಿ ಮಾಡಿ ರಿನೀವಲ್​ಗೆ ಅರ್ಜಿ ಸಲ್ಲಿಸಬೇಕು. ಜೂನ್ ತಿಂಗಳಲ್ಲಿ ಶೇ.50 ರಷ್ಟು ಪೇಮೆಂಟ್ ಮಾಡುತ್ತೇವೆ. ಉಳಿದ ಶೇ.50 ರಷ್ಟನ್ನು ಡಿಸೆಂಬರ್ 31ರಮೇಲೆ ಕಟ್ಟುತ್ತೇವೆ ಎಂದು ಮನವಿ ಮಾಡಿದರು.

ಲಾಕ್​ಡೌನ್ ಇರುವುದರಿಂದ ಹೊಟೇಲ್​ಗಳ ಎಲೆಕ್ಟ್ರಿಸಿಟಿ ಬಿಲ್ ಮಾತ್ರ ಕಟ್ಟುವುದಕ್ಕೆ ಅವಕಾಶ ನೀಡಿ. ಆದರೆ ಮಿನಿಯಮ್ ಡಿಮ್ಯಾಂಡ್ ಚಾರ್ಜ್ ಕಡಿತಗೊಳಿಸಲು ಮನವಿ ಮಾಡಿದರು. ಸರ್ಕಾರಕ್ಕೆ ಆರು ಅಂಶಗಳ ಮನವಿ ಪತ್ರವನ್ನು ಕರ್ನಾಟಕ ಟೂರಿಸಂ ಸೊಸೈಟಿ ಸಲ್ಲಿಸಿದೆ ಎಂದು ಹೇಳಿದರು.

ABOUT THE AUTHOR

...view details