ಬೆಂಗಳೂರು :ಕೋವಿಡ್ನಿಂದ ಪ್ರವಾಸೋದ್ಯಮ ಕುಂಠಿತಗೊಂಡಿದೆ. ಎರಡು ವರ್ಷಗಳಿಂದ ತೀವ್ರ ಸಮಸ್ಯೆ ಎದುರಾಗಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಪ್ರವಾಸೋದ್ಯಮದಿಂದ ಸರ್ಕಾರಕ್ಕೆ 25 ಸಾವಿರ ಕೋಟಿ ನಷ್ಟವಾಗಿದೆ. ಅತಿ ಹೆಚ್ಚಿನ ಉದ್ಯೋಗಾವಕಾಶಗಳನ್ನ ಇಲಾಖೆ ನೀಡಿದೆ. ಉದ್ಯಮವನ್ನ ಮತ್ತೆ ಪುನರ್ಜೀವಗೊಳಿಸಬೇಕಿದೆ. ಹೋಟೆಲ್, ರೆಸಾರ್ಟ್ ಆಸ್ತಿ ತೆರಿಗೆ ಶೇ.50ರಷ್ಟು ಕಡಿತವಾಗಿದೆ.
ಹೋಟೆಲ್ ಪರವಾನಿಗೆ ಶುಲ್ಕ ಮನ್ನಾ ಮಾಡಲಾಗಿದೆ. ಏಪ್ರಿಲ್, ಜೂನ್ ವಿದ್ಯುತ್ ಶುಲ್ಕ ಮನ್ನಾ ಮಾಡಲಾಗಿದೆ. 364 ಪ್ರವಾಸಿ ಗೈಡ್‌ಗಳಿಗೆ ₹5000 ಸಹಾಯ ಧನ ನೀಡಲಾಗಿದೆ. ಒಟ್ಟು 18.20 ಲಕ್ಷ ಸಹಾಯ ಧನ ನೀಡಲಾಗಿದೆ. ಕೈಗಾರಿಕಾ ದರದಲ್ಲಿ ಸ್ಟಾರ್ ಹೋಟೆಲ್ ಆಸ್ತಿ ತೆರಿಗೆ ಸಂಗ್ರಹ ಮಾಡಬೇಕು. ಇದು ಕೋವಿಡ್ ಹಿನ್ನೆಲೆ ಇಲಾಖೆ ಮಾಡಿದೆ ಎಂದರು.
ಟೂರಿಸಂ ಕಾರ್ಯ ಚಟುವಟಿಕೆಗಳ ಅವಲೋಕನಾ ಸಭೆ ಕೋವಿಡ್ ಮೊದಲು ಜಿಡಿಪಿ ಶೇ.14.08ರಷ್ಟಿತ್ತು. 30 ಲಕ್ಷ ನೇರ ಉದ್ಯೋಗವನ್ನ ಸೃಷ್ಟಿಸಿದ್ದೆವು. ಆದರೆ, ಕೋವಿಡ್‌ನಿಂದಾಗಿ ನಷ್ಟವಾಗಿದೆ. ಈ ಆಘಾತದಿಂದ ಸುಸ್ಥಿರತೆಯತ್ತ ಇಲಾಖೆ ಕಾಲಿಡುತ್ತಿದೆ. ಹೊಸ ಪ್ರವಾಸೋದ್ಯಮ ನೀತಿ 20/26 ಬಿಡುಗಡೆ ಮಾಡಿದ್ದೇವೆ. ಫೆಬ್ರವರಿಯಲ್ಲಿ ಕೈಟ್ ಉತ್ಸವ ಆಚರಣೆ ಮಾಡುತ್ತೇವೆ.
ಟೂರಿಸಂ ಸೊಸೈಟಿ ಸಹಯೋಗದಲ್ಲಿ ಆಯೋಜನೆ ಮಾಡಿದ್ದೇವೆ. ಬಂಡವಾಳ ಆಕರ್ಷಣೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 24 ರಿಂದ 26ರವರೆಗೆ ಈ ಕೈಟ್ ಉತ್ಸವ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಸಿನಿಮಾದವರಿಗೆ ಕೆಲವು ಕಡೆ ನಿರ್ಬಂಧವಿದೆ. ಚಿತ್ರೀಕರಣಕ್ಕೆ ನಿರ್ಬಂಧವಿದೆ. ಇಂತಹ ಸಮಸ್ಯೆ ಬಗ್ಗೆ ಗಮನಹರಿಸಿದ್ದೇವೆ. ಏಕಗವಾಕ್ಷಿ ನಡಿ ಅವಕಾಶ ನೀಡುವ ಬಗ್ಗೆ ನಿರ್ಧಾರ ಮಾಡುತ್ತೇವೆ. ಪ್ರಾಚ್ಯ ವಸ್ತು, ಅರಣ್ಯ, ಪ್ರವಾಸೋಧ್ಯಮ ಇಲಾಖೆ ಅನುಮತಿ ಒಂದೇ ಕಡೆ ಸಿಗಲಿದೆ. ನಮಗೂ ಉದ್ಯಮ ಬೆಳೆಸಲು ಅವಕಾಶ ಆಗಲಿದೆ ಎಂದು ವಿವರಿಸಿದರು.
ಅವಲೋಕನಾ ಸಭೆ :ಕರ್ನಾಟಕ ಟೂರಿಸಂ ಸೊಸೈಟಿಯಿಂದ ಕೈಗೊಳ್ಳುತ್ತಿರುವ ಕಾರ್ಯ ಚಟುವಟಿಕೆಗಳ ಅವಲೋಕನ ಸಭೆಯನ್ನು ಇಂದು ನಡೆಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾಪು ಸಿದ್ದಲಿಂಗಸ್ವಾಮಿ, ಸರ್ಕಾರದ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಜೆಎಲ್‌ಆರ್ ನಿರ್ದೇಶಕ ಕುಮಾರ್ ಪುಷ್ಕರ್, ಕರ್ನಾಟಕ ಟೂರಿಸಂ ಸೊಸೈಟಿ ಅಧ್ಯಕ್ಷ ಶ್ಯಾಮರಾಜ್, ಉಪಾಧ್ಯಕ್ಷರಾದ ವಿನಿತ್ ವರ್ಮ, ಕಾರ್ಯದರ್ಶಿ ಮಹಾ ಲಿಂಗಯ್ಯ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಟೂರಿಸಂ ಕಾರ್ಯ ಚಟುವಟಿಕೆಗಳ ಅವಲೋಕನ ಸಭೆ ಆನ್‌ಲೈನ್ ಪೋರ್ಟಲ್ ಉದ್ಘಾಟನೆ :ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಇಂದು ವಿಧಾನಸೌಧದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಚಿವ ಆನಂದ್ ಸಿಂಗ್, ಪ್ರವಾಸೋದ್ಯಮ ಇಲಾಖೆಯ ವಿಡಿಯೋ, ವಿಶೇಷ ಅಂಚೆ ಕವರ್, ನೂತನ ಪ್ರವಾಸೋದ್ಯಮ ನೀತಿ 2020-2026ರ ಮಾರ್ಗಸೂಚಿ, ಕೆಟಿಟಿಎಫ್ ಆನ್‌ಲೈನ್ ಪೋರ್ಟಲ್ ಉದ್ಘಾಟನೆ ಮಾಡಿದರು. ಬಳಿಕ ಪ್ರವಾಸಿ ಗೈಡ್‌ಗಳಿಗೆ ರೂ. 5000 ಸಹಾಯಧನ ಚೆಕ್, ಜಾಕೆಟ್ ಮತ್ತು ಪ್ರಮಾಣ ಪತ್ರ ನೀಡಲಾಯಿತು.
ಕೆಟಿಟಿಎಫ್ ಆನ್ ಲೈನ್ ಪೋರ್ಟಲ್ ಉದ್ಘಾಟನೆ ಬೈಕ್ ಜಾಥಾ :ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿಯಿಂದ ಆಯೋಜಿಸಲ್ಪಟ್ಟ ಬೆಂಗಳೂರಿನಿಂದ ಹಂಪಿವರೆಗಿನ ಬೈಕ್ ಜಾಥಾವನ್ನು ಇಂದು ವಿಧಾನಸೌಧದಲ್ಲಿ ಸಚಿವ ಆನಂದ್ ಸಿಂಗ್ ಉದ್ಘಾಟಿಸಿದರು.