ಕರ್ನಾಟಕ

karnataka

ETV Bharat / city

ರಾಜಧಾನಿಯಲ್ಲಿ ನಾಳೆ, ನಾಡಿದ್ದು ಮಳೆ: ಕರಾವಳಿಯಲ್ಲಿ ಸಂಜೆಯಿಂದ ಮೂರು ದಿನ ವರ್ಷಧಾರೆ - ಹವಾಮಾನ ಇಲಾಖೆ

ರಾಜ್ಯದ ಒಳನಾಡಿನಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಕರಾವಳಿ ಜಿಲ್ಲೆಯ ಎಲ್ಲ ಕಡೆ ಇಂದು ಸಂಜೆಯಿಂದ ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ. ಮೇ 13 ಮತ್ತು 14 ರಂದು ಕೆಲವು ಕಡೆ ಮಳೆಯಾಗಲಿದೆ.

karnataka-today-weather-report
ಕರ್ನಾಟಕ ಹವಾಮಾನ ವರದಿ

By

Published : May 10, 2021, 7:45 PM IST

ಬೆಂಗಳೂರು: ನಗರದಲ್ಲಿ ಮುಂದಿನ ಎರಡು ದಿನಗಳ ಕಾಲ ಕೆಲವು ಕಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಸಿ. ಎಸ್. ಪಾಟೀಲ್ ಮಾಹಿತಿ ನೀಡಿದ್ದಾರೆ.

ರಾಜ್ಯದ ಒಳನಾಡಿನಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಕರಾವಳಿ ಜಿಲ್ಲೆಯ ಎಲ್ಲ ಕಡೆ ಇಂದು ಸಂಜೆಯಿಂದ ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ. ಮೇ 13 ಮತ್ತು 14 ರಂದು ಕೆಲವು ಕಡೆ ಮಳೆಯಾಗಲಿದೆ.

ಕರಾವಳಿಯಲ್ಲಿ ಸಂಜೆಯಿಂದ ಮೂರು ದಿನ ವರ್ಷಧಾರೆ

ಉತ್ತರ ಒಳನಾಡಿನಲ್ಲಿ ಇಂದು ಸಂಜೆಯಿಂದ 5 ದಿನಗಳ ಕಾಲ ಅಲ್ಲಲ್ಲಿ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನಲ್ಲಿ ಇಂದು ಸಂಜೆಯಿಂದ ಎರಡು ದಿನ ಮತ್ತು ಮೇ 13 14 ರಂದು ಅಲ್ಲಲ್ಲಿ ಹಾಗೂ ಮೇ 12 ರಂದು ಬಹುತೇಕ ಎಲ್ಲ ಕಡೆ ಮಳೆಯಾಗಲಿದೆ.

ಇಂದು ಭಟ್ಕಳದಲ್ಲಿ 4 ಸೆ. ಮೀ, ಯಾದವಾಡ ಬೆಳಗಾವಿ ಜಿಲ್ಲೆಯಲ್ಲಿ 5 ಸೆ. ಮೀ, ಮಂಡ್ಯ ಜಿಲ್ಲೆಯ ಬೆಳ್ಳೂರಿನಲ್ಲಿ 2 ಸೆ. ಮೀ ಮಳೆಯಾಗಿದೆ. ಕಲಬುರಗಿಯಲ್ಲಿ 38.6, ರಾಯಚೂರಿನಲ್ಲಿ 39, ವಿಜಯಪುರ 36, ಬೆಂಗಳೂರು 34.4, ಚಿಂತಾಮಣಿ 35.1, ಮೈಸೂರಿನಲ್ಲಿ 35 ಡಿಗ್ರಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ಸಿ.ಎಸ್. ಪಾಟೀಲ್ ಅವರು ಮಾಹಿತಿ ನೀಡಿದರು.

ABOUT THE AUTHOR

...view details