ಬೆಂಗಳೂರು: ರಾಜ್ಯಾದ್ಯಂತ ಒಣಹವೆ ಮುಂದುವರಿದಿದೆ. ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 37.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್ ಪಾಟೀಲ್ ತಿಳಿಸಿದರು.
ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ: ರಾಜಧಾನಿಯಲ್ಲೂ ಏರುತ್ತಿದೆ ತಾಪಮಾನ - ಹವಾಮಾನ ವರದಿ
ಕೊಪ್ಪಳದಲ್ಲಿ -36.5, ರಾಯಚೂರಿನಲ್ಲಿ- 36.4, ವಿಜಯಪುರದಲ್ಲಿ -36, ಬೀದರ್ ನಲ್ಲಿ- 35, ಹಾವೇರಿಯಲ್ಲಿ 35, ಗದಗ- 36, ಶಿವಮೊಗ್ಗ- 35, ಮಂಡ್ಯ-34 ಹಾಗೂ ಬೆಂಗಳೂರಲ್ಲಿ- 33.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ.
ಹವಾಮಾನ ವರದಿ
ಕೊಪ್ಪಳದಲ್ಲಿ 36.5, ರಾಯಚೂರಿನಲ್ಲಿ 36.4, ವಿಜಯಪುರದಲ್ಲಿ 36, ಬೀದರ್ ನಲ್ಲಿ 35, ಹಾವೇರಿಯಲ್ಲಿ 35, ಗದಗ 36, ಶಿವಮೊಗ್ಗ 35, ಮಂಡ್ಯ 34 ಹಾಗೂ ಬೆಂಗಳೂರಲ್ಲಿ 33.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ.
ರಾಜ್ಯದ ಕರಾವಳಿಯಲ್ಲಿ ಗರಿಷ್ಟ 33-35, ಕನಿಷ್ಟ ಉಷ್ಣಾಂಶ 23-25 ಡಿಗ್ರಿ ಸೆಂಟಿಗ್ರೇಡ್ ದಾಖಲಾಗಿದೆ. ಮಾರ್ಚ್ 9 ರಿಂದ 13 ರವರೆಗೆ ಒಣಹವೆ ಮುಂದುವರೆಯುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳವರೆಗೆ ಗರಿಷ್ಠ 34 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 18 ಡಿಗ್ರಿ ಸೆಂಟಿಗ್ರೇಡ್ ಇರುವ ಸಾಧ್ಯತೆ ಇದೆ ಎಂದರು.